*ತಾತ್ಕಾಲಿಕ ಗರ್ಭನಿರೋಧಕ ವಿಧಾನ ‘ಅಂತರ’ ಚುಚ್ಚುಮದ್ದು ಉಪಯುಕ್ತ: ವೈದ್ಯರ ಸಲಹೆ*

ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ‘ಅಂತರ’ ಎಂಬ ಹೆಸರಿನಿಂದ ಕರೆಯಲ್ಪಡುವ ತಾತ್ಕಾಲಿಕ ಗರ್ಭನಿರೋಧಕ ವಿಧಾನವಾದ ಅಂತರ ಚುಚ್ಚುಮದ್ದು ಅತ್ಯಂತ ಸರಳವಾಗಿದೆ. ಯಾವುದೇ ಅನಾನೂಕೂಲತೆಯಾಗದಂತೆ ದಂಪತಿಯ ನಿರ್ಧಾರದ ಮೇರೆಗೆ ಮೊದಲ ಹೆರಿಗೆ ನಂತರ ಮಗುವಿನ ತಾಯಿಯು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪಡೆಯಬಹುದಾದ…

ಯುವಕರು ಪಕ್ಷ ಸಂಘಟನೆಯಲ್ಲಿ ನಿರಂತರ ತೊಡಗಿದರೆ ಉನ್ನತ ಸ್ಥಾನ ಪಡೆದುಕೊಳ್ಳಲು ಸಾಧ್ಯ – ಡಾ: ದಾದಾಪೀರ್

ಮಸ್ಕಿ: ಇಂದು ಮಸ್ಕಿ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು ಪ್ರಾಸ್ತವಿಕ ನುಡಿ ಮಸ್ಕಿ ಯುವ ಕಾಂಗ್ರೆಸ್ ಅಧ್ಯಕ್ಷರು ಶ್ಯಾಮೀದ್ ಗುಂಜಳ್ಳಿ ರವರು ಮಾತನಾಡಿದರು ನಂತರ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಾ: ದಾದಾಪೀರ್ ಅವರು…

*ಮೇಥೋಡಿಸ್ಟ್ ಚರ್ಚ್ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ*

ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ನವೆಂಬರ್ 24ರಂದು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಇಡಪನೂರು ಗ್ರಾಮಕ್ಕೆ ಭೇಟಿ ನೀಡಿ, ಅಲ್ಪಸಂಖ್ಯಾತರ…

ಯರಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಸಾಧನೆ

ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ 17 ವರ್ಷದೊಳಗಿನ ಬಾಲಕೀಯರ ಜಿಲ್ಲಾ ಮಟ್ಟದ ಹ್ಯಾಮರ್ ಥ್ರೋನಲ್ಲಿ ನಗರದ ಯರಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕವಿತಾ ತಂದೆ ತಾಯಪ್ಪ ಅವರು ದ್ವಿತೀಯ…

ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಿ ಇಲ್ಲವೆ ದಯಾಮರಣಕ್ಕೆ ಅವಕಾಶ ಕೊಡಿ – ಡಾ. ಹೆಚ್ ಆರ್ ಕಲ್ಮನಿ

ಗದಗ,ನ,24:- ಸಂಘದ ರಾಜ್ಯಾಧ್ಯಕ್ಷರಾದ ಡಾಕ್ಟರ್. ಹನುಮಂತ ಗೌಡ ಕಲ್ಮನಿಯವರು ಇಂದು ಬೆಳಿಗ್ಗೆ ಗದಗಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಕಳೆದ ಮೂರೂ ದಶಕಗಳಿಂದ ಅತಿಥಿ ಉಪನ್ಯಾಸಕರು ಶಿಕ್ಷಣ ವಲಯದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದರೂ,ಅವರ ಸೇವೆಗೆ ಶಾಶ್ವತ ಪರಿಹಾರ ಕೊಡಲು ಯಾವುದೇ ಸರ್ಕಾರ…

ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ಲಿಂಗಸೂಗೂರು ತಾಲೂಕಿನ ಮುದಗಲ್‌ನ ಪಿ.ಎಂ. ಶ್ರೀ ಜವಾಹರ್ ನವೋದಯ ವಿದ್ಯಾಲಯದಿಂದ 2026–27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಯುವ ಜೆಎನ್‌ವಿಎಸ್‌ಟಿ–2026 ಪ್ರವೇಶ ಪರೀಕ್ಷೆಯು 2026ರ ಡಿಸೆಂಬರ್ 13ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಪರೀಕ್ಷೆಗೆ…

ಸಾರಿಗೆ ಇಲಾಖೆಯಿಂದ ಬಾಕಿ ದಂಡಕ್ಕೆ ವಿಶೇಷ ರಿಯಾಯಿತಿ

ರಾಯಚೂರು ನವೆಂಬರ್ 24 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 1991-92ರಿಂದ 2019-20ರ ಅವಧಿಯಲ್ಲಿ ಮೋಟಾರು ಕಾಯ್ದೆ ನಿಯಮಗಳ ಉಲ್ಲಂಘನೆ ಸಂಬಂಧ ದಾಖಲಾಗಿ ಬಾಕಿ ಉಳಿದಿರುವ ಡಿಎಸ್‌ಎ (ಇಲಾಖಾ ಶಾಸನ) ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಸರ್ಕಾರ…

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಗದಗದ ಜಗದ್ಗುರು ತೋಂಟದಾರ್ಯ ಮಠದ ಶ್ರೀಗಳ ಅಭಯಹಸ್ತ .

ಗದಗ, ನ,24:- ಕರ್ನಾಟಕ ರಸಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಹನುಮಂತಗೌಡ ಕಲ್ಮನಿ ಗದಗ ನ ಶ್ರೀ,ಜಗದ್ಗುರು ತೋಂಟದಾರ್ಯ ಮಠದ ಡಾಕ್ಟರ್.ಸಿದ್ದರಾಮ ಮಹಾಸ್ವಾಮಿಗಳವರನ್ನು ಬೇಟಿಯಾಗಿ ಆಶೀರ್ವಾದ ಪಡೆದು ದಿ.25-11-2025 ರಂದು ನಡೆಯಲಿರುವ ಅತಿಥಿ ಉಪನ್ಯಾಸಕರ…

ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ರವಿಕುಮಾರ ಪಾಟೀಲ್ ಆಯ್ಕೆ

ಮಾನ್ವಿ: ಪಟ್ಟಣದ ತಾಲೂಕು ವಕೀಲರ ಸಂಘಕ್ಕೆ 2026-27 ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ವಕೀಲರ ಸಂಘದ ಅಧ್ಯಕ್ಷರಾಗಿ ರವಿಕುಮಾರ ಪಾಟೀಲ್, ಉಪಾಧ್ಯಕ್ಷರಾಗಿ ಶಿವಪ್ಪ ಸುಂಕನೂರು,ವಿಶ್ವನಾಥ ರಾಯಪ್ಪ, ಪ್ರ.ಕಾರ್ಯದರ್ಶಿಯಾಗಿ ಯಲ್ಲಪ್ಪ ಬಾದರದಿನ್ನಿ, ಜಂಟಿ ಕಾರ್ಯದರ್ಶಿಯಾಗಿ ನಾಗರಾಜ ಗೂಗಲ್, ಮಹಿಳಾ ಮೀಸಲು ಸ್ಥಾನಗಳಾದ ಖಜಾಂಚಿ…

ಕೃಷಿ ಉಪನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಧರಣಿ ಆರಂಭ

ಲಿಂಗಸುಗೂರು : ಪಟ್ಟಣದಿಂದ ಸಿಂಧನೂರಿಗೆ ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಕೃಷಿ ಕಚೇರಿ ಮುಂದೆ ಸೋಮವಾರ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಧರಣಿ ಆರಂಭಿಸಿದರು. ಲಿಂಗಸುಗೂರು ಕೃಷಿ ಉಪನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ ಮಾಡಿ, 2024ರ ಅಗಸ್ಟ್‌19ರಂದು ಸರಕಾರದ…