ಮಸ್ಕಿ: ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಶಕೀಲ್ ಅಹ್ಮದ್ ನಿರ್ದೇಶನದ ನಿರ್ದಿಗಂತ ತಂಡ ಮೈಸೂರ ಪ್ರಸ್ತುತಿ ‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕ ಪ್ರದರ್ಶನದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಸ್ಕಿ.
ಸರಕಾರಿ ನೌಕರರ ಸಂಘ,
ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ,ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು,ಇತ್ಲಿ ಪೌಂಡೇಶನ್,ಲಯನ್ಸ್ ಕ್ಲಬ್ ಮಸ್ಕಿ
ಸಹಯೋಗದಲ್ಲಿ ಜರುಗಿದ ನಾಟಕ.
ಈ ಜ್ವಲಂತ ಸಮಸ್ಯೆಗಳ ನಡುವೆಯೂ ನಾವು ಭಾರತ ಪ್ರಕಾಶಿಸುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.ಈ ಹೆಮ್ಮೆಪಡುವ ವಿಷಯಗಳ ನಡುವೆಯೂ ಸಾಮಾಜಿಕ ಸಮಸ್ಯೆಗಳು ಹಲವಾರು ಇವೆ.ಇಂಥ ಜ್ವಲಂತ ಸಮಸ್ಯೆಗಳಿಗೆ ಸರ್ಕಾರಗಳು ಶಾಶ್ವತವಾದ ಪರಿಹಾರವನ್ನು ಕೊಡಬೇಕು.ಆದರೆ ವಿಪರ್ಯಾಸವೆಂದರೆ ಆಳುವ ಸರ್ಕಾರಗಳು ವ್ಯವಸ್ಥೆಯ ಎಲ್ಲಾ ಆಯಾಮಗಳ ಮೇಲೆ ತೆರಿಗೆಯನ್ನು ವಿಧಿಸಿ ಅದನ್ನ ವಸೂಲಿ ಮಾಡುತ್ತಾ ಹೋಗುತ್ತವೆ. ಸಾಮಾಜಿಕ ಹಿಂದುಳಿದ ಬಡವರ್ಗಗಳು ಈ ತೆರಿಗೆಯನ್ನು ಕಟ್ಟಲಾಗದ ಆರ್ಥಿಕ ಹಿನ್ನೆಡೆಯ ಸ್ಥಿತಿಯಲ್ಲಿದೆ.ಇಂಥ ಗಂಭೀರ ವಿಷಯವನ್ನು ‘ಕೊಡಲ್ಲ ಅಂದ್ರೆ ಕೊಡಲ್ಲ’ ಎಂಬ ಅರ್ಥಪೂರ್ಣ ಶೀರ್ಷಿಕೆಯನ್ನು ಹೊಂದಿ ಈ ನಾಟಕವು ಜನರಲ್ಲಿ ಸಾಮಾಜಿಕ ಜಾಗೃತಿ ಭಾವವನ್ನು ಎಚ್ಚರಿಸುವ ಕಥಾ ವಿಷಯವನ್ನು ಹೊಂದಿ ಮನೋಜ್ಞ ನಟನೆಯ ಮೂಲಕ ನಾಟಕವನ್ನು ಪ್ರಸ್ತುತಪಡಿಸಿದರು.
ಈ ವೇಳೆ ಡಾ. ಶಿವ ಶರಣಪ್ಪ ಇತ್ಲಿ, ಸಿ ದಾನಪ್ಪ ನಿಲಗಲ್, ವಿದ್ಯಾವತಿ
ವನಕಿ, ಪಂಪಾಪತಿ ಹೂಗಾರ, ಕಳಕಪ್ಪ ಆದಿಮನಿ, ಈರಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

