ಅರಕೇರಾ : ದೇವದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಖಾಸಗಿ ವಾಣಿಜ್ಯ ಕಟ್ಟಡವೊಂದರ ಮೇಲ್ಚಾವಣೆ ಕುಸಿದು ಕ್ಯಾದಿಗ್ಗೇರಾ ಗ್ರಾಮದ ನಾಗರಾಜ, ಸಮುದ್ರ ಗ್ರಾಮದ ರವಿಕುಮಾರ ಕೋತಿಗುಡ್ಡ ಗ್ರಾಮದ ಅರ್ಜುನ ಎಂಬ ಮೂವರು ಯುವ ವಿದ್ಯಾರ್ಥಿಗಳು ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿರುವುದು ತ್ರೀವ ನೋವುನ್ನುಂಟುಮಾಡಿದೆ. ಈ ದುಃಖದ ಸಂದರ್ಭದಲ್ಲಿ ಮಮತಾ ಪ್ರಭುದೊರೆ ನಾಗೋಲಿಯವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಾಂತ್ವನ ಹೇಳಲು ಭೇಟಿ ನೀಡಿದರು.
ದುಃಖತ್ತಪ್ಪ ಕುಟುಂಬಗಳಿಗೆ ಮಾನಸಿಕ ಬೆಂಬಲ ಮತ್ತು ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಗಳಿಗೆ ದುಃಖವನ್ನು ಬರಿಸುವ ಶಕಿ ್ತದೊರೆಯಿಲಿ ಎಂದು ಪ್ರಾರ್ಥಿಸಿದರು. ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಕಾರ್ಯವು .ಮಮತಾ ಪ್ರಭೂದೊರೆ ನಾಗೋಲಿ ಅವರು ಪ್ರತಿಯೊಂದು ಕುಟುಂಬಕ್ಕೂ ವೈಯಕ್ತಿಕವಾಗಿ೧೦ ಸಾವಿರರೂಪಾಯಿಗಳ ಚೆಕ್ ನೀಡಿ ತಮ್ಮ ಅಹಾನುಭೂತಿಯನ್ನು ವ್ಯಕ್ತಪಡಿಸಿದರು. ಈ ಸಣ್ಣ ನೆರು ಅವರ ದೊಡ್ಡ ಮನಸ್ಸಿಗೆ ಸಾಕ್ಷಿಯಾಗಿದೆ.
ಸಂದರ್ಭದಲ್ಲಿ ಮೋನಪ್ಪನಾಯಕ ಕ್ಯಾದಿಗ್ಗೇರಾ,ಮಕ್ಕಣ್ಣನಾಯಕ, ಬಂಡೆಪ್ಪ ಹೊನ್ನಕಾಟಮಳ್ಳಿ,ನಾಗರಾಜಬೇರಿ ಮಲ್ಲಿನಾಯಕನದೊಡ್ಡಿ, ಪ್ರಭುರಾಯಪಂದ್ಯಾನ, ನಾಗರಾಜನಾಯಕ ಅರಕೇರಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

