ಕೃಷ್ಣಾಭಾಗ್ಯ ಜಲನಿಗಮ ನಿಯಮಿತ ವ್ಯಾಪ್ತಿಯಲ್ಲಿ ಬರುವ ಬಸವಸಾಗರ ಜಲಾಶಯಕ್ಕೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ಡಿ.ಎಸ್. ಹೂಲಗೇರಿ ಭೇಟಿ ನೀಡಿ ಅಲ್ಲಿನ ನೀರಿನ ಪ್ರಮಾಣ ಪರೀಶಿಲಿಸಿದರು. ಈಗಾಗಲೇ 19 ಟಿಎಂಸಿ ನೀರಿನ ಮಟ್ಟ ಇದ್ದು, ಇನ್ನೂ 14 ಟಿಎಂಸಿ ಜಲಾಶಯಕ್ಕೆ ನೀರು ತುಂಬುವುದು ಅವಶ್ಯಕತೆ ಇದ್ದು ಇನ್ನೂ 2-3 ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಸಾದ್ಯತೆ ಇದೆ ಎಂದು ಅಧಿಕಾರಿಗಲಿಂದ ಮಾಹಿತಿ ಪಡೆದುಕೊಂಡಿದ್ದಾರೆ , ರೈತರು ಯಾವ ರೀತಿಯಲ್ಲೂ ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅದ್ಯಕ್ಷ ಮಹ್ಮದ್ ರಫೀ, ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಜೀವನಗೌಡ ಬಾಳೆಗೌಡ್ರು ಉಪಸ್ಥಿತಿ ಇದ್ದರು.\

Leave a Reply

Your email address will not be published. Required fields are marked *