ಇಂದು ನಾವು ಪ್ರತಿ ವರ್ಷ ಜನವರಿ 12ರಂದು ರಾಷ್ಟ್ರೀಯ ಯುವ ದಿನ ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲಿ ಯುವಶಕ್ತಿ ಜಾಗೃತಿ ದಿನ ಈ ದಿನವನ್ನು ನಾವು ಮಹಾನ್ ಚಿಂತಕ ಮಹಾನ್ ತತ್ವಜ್ಞಾನಿ ಯುಗಪುರುಷ ದೇಶ ಭಕ್ತ ಯುವಕರಿಗೆ ಪ್ರೇರಣೆ ದೀಪವಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಆಚರಿಸುತ್ತೇವೆ. ಯಾವುದೇ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಶರಲ್ಲಿದೆ ಯುವಕರು ಶಕ್ತಿಶಾಲಿಗಳು ಚೈತನ್ಯ ಬರಿತರು ಹೊಸ ಆಲೋಚನೆಗಳನ್ನು ಹೊಂದಿರುವವರು ಅದರಿಂದ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ದೊಡ್ಡದು. ಇಂದಿನ ಯುವಕರು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಹೊಂದಿದ್ದಾರೆ ಯುವಶಕ್ತಿ ಶಿಸ್ತು ಮತ್ತು ಮೌಲ್ಯಗಳಿಂದ ಬೆಳೆದರೆ ನಾಯಕತ್ವ ಸಹರವಾಗಿ ಮೂಡುತ್ತದೆ ಯುವಕರು ಶಿಕ್ಷಣದ ಜೊತೆಗೆ ನಮಾಜದ ಹೊಣೆಗಾರಿಕೆಯನ್ನು ಅರಿಯಬೇಕು ಇಂದಿನ ಶ್ರಮವೇ ನಾಳೆಯ ಯಶಸ್ವಿಗೆ ದಾರಿ ಮಾಡಿಕೊಡುತ್ತದೆ ಆದ್ದರಿಂದ ಯುವಕರು ಜವಾಬ್ದಾರಿ ಹಿತವಾಗಿ ಬದುಕಿದರೆ ದೇಶದ ಪ್ರಗತಿಯುತ್ತ ಸಾಗುತ್ತದೆ. ಯುವಕರಲ್ಲಿ ದೈಹಿಕ ಶಕ್ತಿ ಮಾನಸಿಕ ಸಾಮರ್ಥ್ಯ ಸೃಜನಶೀಲತೆ ಹೆಚ್ಚಿರುತ್ತದೆ ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ದೇಶದ ಪ್ರಗತಿ ವೇಗವಾಗುತ್ತದೆ ಶಿಕ್ಷಣದ ಮೂಲಕ ಯುವಕರು ಜ್ಞಾನವಂತರಾಗಿ ಕೌಶಲ್ಯಗಳನ್ನು ಬಳಸಿಕೊಂಡು ನಮಾಜದ ಅಭಿವೃದ್ಧಿಗೆ ಕೈಜೋಡಿಸಬಹುದು ಯುವಕರು ಎಂದರೆ ಕೇವಲ ವಯಸ್ಸಿನ ಅಂತವಲ್ಲ ಯುವಕರೆಂದರೆ ಶಕ್ತಿ ಉತ್ಸಾಹ. ಧೈರ್ಯ. ನವ ಚಿಂತನೆ ಮತ್ತು ಬದಲಾವಣೆಯ ಸಂಕೇತ ಎಂದರ್ಥ ಆದರೆ ಇಂದಿನ ಯುವ ಜನಾಂಗವು ಎದುರಿಸುತ್ತಿರುವ ಸವಾಲುಗಳು ಕಡಿಮೆಯಲ್ಲ ಅತಿಯಾದ ಮೊಬೈಲ್ ಬಳಕೆ. ನಮಯ ದುರುವಯೋಗ, ಗುರಿಯ ಕೊರತೆ ನೈತಿಕ ಮೌಲ್ಯಗಳ ಹಿನ್ನಡೆ ಇವೆಲ್ಲವೂ ಯುವಶಕ್ತಿಯನ್ನು ಕುಗ್ಗಿಸುತ್ತವೆ. ಇದರಿಂದ ಹೊರಬರಲು ಯುವಕರು ಕಿಸ್ತು ಪರಿಶ್ರಮ ಮತ್ತು ಆತ್ಮವಿಶ್ವಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಉದ್ಯೋಗದ ಜೊತೆಗೆ ಸೇವಾ ಭಾವನೆಯನ್ನು ಯಶಸ್ವಿ ಜೊತೆಗೆ ವಿನಯವನ್ನು ಬೆಳೆಸಿಕೊಳ್ಳಬೇಕು. ಒಬ್ಬ ಯುವಕ ತನ್ನ ಜೀವನವನ್ನು ಉತ್ತಮಗೊಳಿಸಿಕೊಂಡರೆ ಅವನ ಕುಟುಂಬ ಬೆಳೆಯುತ್ತದೆ ಕುಟುಂಬ ಬೆಳೆಯುತ್ತಿದ್ದಂತೆ ಸಮಾಜ ಬೆಳೆಯುತ್ತದೆ ಸಮಾಜ ಬೆಳೆಯುತ್ತಿದ್ದಂತೆ ದೇಶ ಬಲಿಷ್ಠವಾಗುತ್ತದೆ. ಇಂದಿನ ಯುವಕರು ತಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ನಾಳೆಯೇ ಶ್ರೇಷ್ಠ ನಾಯಕರಾಗುತ್ತಾರೆ ಯುವಶಕ್ತಿಯಿಂದಲೇ ದೇಶದ ಪ್ರಗತಿ ಸಾಧ್ಯ. ಯುವಕರು ತಮ್ಮ ವ್ಯಕ್ತಿತ್ವದ ನಡೆ ಮತ್ತು ಸೇವಾ ಭಾವನೆಯ ಮೂಲಕ ಸಮಾಜಕ್ಕೆ ಆದರ್ಶ ರಾಗಬಹುದು ಯುವ ಶಕ್ತಿ ಸಕರಾತ್ಮಕ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ನಮ್ಮ ಭಾರತ ಮತ್ತು ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ
*ರಾಷ್ಟ್ರೀಯ ಯುವ ದಿನದ ಮಹತ್ವ ..
ರಾಷ್ಟ್ರೀಯ ಯುವ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೇನೆಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಮೌಲ್ಯಗಳು ಮತ್ತು ಆದರ್ಶಗಳನ್ನು ಅಳವಡಿಸಿಕೊಳ್ಳಬಹುದು ಮತ್ತು ಅವರ ಆಲೋಚನೆಗಳ ಬಗ್ಗೆ ಯುವ ಜನತೆಗೆ
ತಿಳಿಸಿ ಅವರು ದೇಶದ ಪ್ರಗತಿಗೆ ಕೊಡುಗೆ ನೀಡಲು ಪ್ರೇರೇಪಿಸುವುದು. ಯುವಕರಿಗೆ ಸ್ಫೂರ್ತಿ ನೀಡುವುದಾಗಿದೆ. ಯುವಕರು ಈ ದೇಶದ ಆಸ್ತಿ ಅಥವಾ ಸಂಪತ್ತು ಎನ್ನಲಾಗುತ್ತದೆ ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕು ಎಂಬುವುದು ನಮ್ಮ ಇಂದಿನ ತಲೆಮಾರಿನವರ ಆಶಯ ಒಟ್ಟಾರೆ ಯುವ ಜನರಿಂದ ಪರಿವರ್ತನೆ ಸಾಧ್ಯ ದೇಶದ ನಾಳೆಯ ಸುಭದ್ರ ಭವಿಷ್ಯಕ್ಕೆ ಇಂದಿನ ಯುವ ಜಿನರೇ ಬುನಾದಿ ಸ್ವಾಮಿ ವಿವೇಕಾನಂದರ ನೀಡಿದ ಸಂದೇಶ ಯುವಜನತೆಗೆ ನೀಡಿದ ಅವರ ಶರೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುವುದು ನರ್ವಕಾಲಕ್ಕೂ ನೆನೆಯುವ ಯುವಕರನ್ನು ಒಳ್ಳೆಯ ಕೆಲಸಗಳಿಗೆ ಅಥವಾ ದೇಶ ಕಟ್ಟುವ ಕಾಯಕದಲ್ಲಿ ತೊಡಗುವಂತೆ ಕರೆ ನೀಡಿದರು. ಇಂದು ನಾವು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ರಾಷ್ಟ್ರೀಯ ಯುವ ದಿನವನ್ನು ಆಚರಣೆ ಸಾರ್ಥಕತೆ ದೊರೆಯುತ್ತದೆ. ಯುವಕರೇ ನೀವೇ ದೇಶದ ಭವಿಷ್ಯ ನಿಮ್ಮ ಕೈಯಲ್ಲೇ ನಾಳೆಯ ಭಾರತ
ರಾಘವೇಂದ್ರ ಸುಂಕೇಶ್ವರ, ಉಪನ್ಯಾಸಕರು. ಕಲ್ಮಠ ಪದವಿ ಮಹಾವಿದ್ಯಾಲಯ

