ಮಾನ್ವಿ: ಶ್ರೀ ಪರಿಪೂರ್ಣ ಸಾನತನ ಚಾರಿಟಬಲ್ ಟ್ರಸ್ಟ್ ಹಾಗೂ ನಿವೃತ್ತ ಯೋಧರಿಂದ ಸ್ವದೇಶಿ ಜಾಗರಣ ಸೈಕಲ್ ಜಾಗೃತಿ ಜಾಥ ತಂಡದ ಸದಸ್ಯರು ಇಂದು ಪಟ್ಟಣಕ್ಕೆ ಆಗಮಿಸಿ ಕಾಕತೀಯ ಶಿಕ್ಷಣ ಸಂಸ್ಥೆಯ ವಸತಿ ನಿಲಯದ ಮಕ್ಕಳಿಗೆ ಜಾಗೃತಿ ಮೂಡಿಸಿ ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಮಾತನಾಡಿ ಶ್ರೀ ಪರಿಪೂರ್ಣ ಸಾನತನ ಚಾರಿಟಬಲ್ ಟ್ರಸ್ಟ್ ಹಾಗೂ ಮಾಜಿ ಯೋಧರಿಂದ ಜನರಲ್ಲಿ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಿವೃತ್ತ ಭಾರತೀಯ ಸೇನೆಯ ಯೋಧರೊಂದಿಗೆ ಬೆಂಗಳೂರಿನ ನೆಲಮಂಗಲದಿAದ ಸೈಕಲ್ ಜಾಗೃತಿ ಜಾಥವನ್ನು ಪ್ರಾರಂಭಿಸಿ ರಾಜ್ಯದ 22 ಜಿಲ್ಲೆಗಳಲ್ಲಿ ಒಟ್ಟು 2650 ಕಿ.ಮೀ.ದೂರವನ್ನು ಸೈಕಲ್ ಮೂಲಕ ಸಂಚಾರಿಸಿ ಮಾರ್ಗದಲ್ಲಿ ಬರುವ ತಾಲೂಕು ಹಾಗೂ ಗ್ರಾಮಗಳಲ್ಲಿನ ಜನರಿಗೆ ಹಾಗೂ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಬೆಳವಣಿಗೆ ಯಾಗುತ್ತದೆ ಎನ್ನುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು 10 ದಿನಗಳಲ್ಲಿ 7 ಜಿಲ್ಲೆಗಳಲ್ಲಿ ಸಂಚರಿಸಿ ಮರಳಿ ಬೆಂಗಳೂರಿನಲ್ಲಿ ಜಾಗೃತಿ ಜಾಥ ಮುಗಿಸಲಾಗುವುದು. ನಮ್ಮ ದೇಶದಲ್ಲಿ ನಮ್ಮ ರೈತರು ಉತ್ಪದಿಸುವ ಆಹಾರ ಧಾನ್ಯಗಳನ್ನು ವಸ್ತುಗಳನ್ನು ,ಸ್ವದೇಶಿ ಉತ್ಪನ್ನಗಳನ್ನು ಬಳಸದೆ ಇದ್ದಲ್ಲಿ ನಮ್ಮ ರೈತರು,ಕಾರ್ಮಿಕರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ. ವಿದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ಸಂಪತ್ತು ವಿದೇಶಗಳಿಗೆ ಸೇರುತ್ತದೆ. ನಮ್ಮ ವಸ್ತುಗಳನ್ನು ಬಳಸಿ ನಮ್ಮ ಸಂಪತ್ತು ನಮ್ಮಲಿ ಉಳಿಸಿಕೊಳೋಣ ಎನ್ನುವ ಉದ್ದೇಶದಿಂದ ದೇಶದ ಪ್ರಾಧಾನಿಗಳು ಮೇಕ್ ಇನ್ ಇಂಡಿಯ ಪರಿಕಲ್ಪನೆಯನ್ನು ನಮಗೆ ನೀಡಿದ್ದಾರೆ ನಾವು ಹೋರಾಟದಿಂದ ಗಳಿಸಿದ ಸ್ವಾತಂತ್ರö್ಯದ ರಕ್ಷಣೆಗಾಗಿ ನಮ್ಮ ದೇಶದ ಗಡಿಯಲ್ಲಿ ಯೋಧರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದ್ದರಿಂದ ನಮ್ಮಗೆ ಅಗತ್ಯವಿರುವ ವಸ್ತುಗಳನ್ನು ನಾವೆ ತಯಾರಿಸಿಕೊಂಡು ಬಳಸಿಕೊಳೋಣ ನಮ್ಮ ಆರ್.ಬಿ.ಐ.ರೂಪಿಸಿದ ಭಾರತ ಆಫ್,ಭಿಮ ಆಪ್ ಬಳಸೋಣ ಎಂದು ಕರೆ ನೀಡಿದರು.
ನಿವೃತ್ತ ಉಪಕಾರ್ಯದರ್ಶಿ ರಮೇಶ ನರಸಿಂಹ, ನಿವೃತ್ತ ಭಾರತೀಯ ಸೇನೆಯ ಅಧಿಕಾರಿ ಕರ್ನಾಲ್ ಖಂಡಸ್ವಾಮಿ,ಕಾಮೆAಡರ್ ನಿಲಕಂಠ,ಡಾ.ಗೋಪಾಲಕೃಷ್ಣ ಪಿಳೈ,ಕ್ಯಾಪ್ಟನ್ ಡಾ.ನೆಡುನಚಿಜೀಯನ್, ಸಹಸ್ರನಾಮಮಿಯಾರ್, ಬಾಬು ಕಮಲಕಾರ್ , ವಾಣಿಜ್ಯೋದ್ಯಮಿ ಹೆಮಂತ್ ಜಾದವ್, ಸಿವೀಲ್ ಇಂಜಿನಿಯರ್ ಸಾಗರ್ ದೇವರಾಜ, ರವರ ತಂಡದಿoದ ಸೈಕಾಲ್ ಜಾಥ ಮೂಲಕ ಸ್ವದೇಶಿ ಬಳಸಿ ದೇಶಬೆಳೆಸಿ ಎನ್ನುವ ಘೋಷ ವಾಕ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯನಡೆಯಿತು.
ಕಕಾತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗೋಡವರ್ತಿ ಸತ್ಯನಾರಾಯಣ, ಕಾರ್ಯದರ್ಶಿ ಜಿ. ಶ್ರೀನಿವಾಸ, ಸುಬ್ಬರಾವ್ ಚೌದ್ರಿ,ಉಪಾಧ್ಯಕ್ಷರಾದ ಪುಟ್ಟಪ್ರಸಾದ್, ಎಂ.ಆರ್.ರಾಜು, ಪಣಿಕುಮಾರ, ನಾಗೇಶ್ವರರಾವ್, ದೊರೆಬಾಬು, ಬಿ.ಟಿ. ಸತ್ಯನಾರಾಯಣ, ಜಿ,ಶ್ರೀನಿವಾಸ, ಎಸ್.ರಮೇಶ, ಪಂಡು, ಕಕಾತೀಯ ಶಾಲೆಯ ಮುಖ್ಯಗುರು ವೀರಭದ್ರಗೌಡ ಸೇರಿದಂತೆ ವಸತಿ ಶಾಲೆಯ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *