ಕಸಾಪ ವತಿಯಿಂದ ಬಸವನಗೌಡ ಬಾದರ್ಲಿ ಹುಟ್ಟು ಹಬ್ಬ ಆಚರಣೆ
ಸಿಂಧನೂರು : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾನ್ಯ ಶ್ರೀ ಬಸವನಗೌಡ ಬಾದರ್ಲಿ (ವಿಧಾನ ಪರಿಷತ್ ಸದಸ್ಯರು, ) ಅವರ ಜನ್ಮದಿನದ ಅಂಗವಾಗಿ ಭಾವಪೂರ್ಣವಾಗಿ ಶುಭಾಶಯ ಕೋರಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ…
ವಾಲ್ಮೀಕಿ ಶ್ರೀಗಳು ಆರೋಗ್ಯವಾಗಿದ್ದಾರೆ : ಸಂಸದ ಜಿ ಕುಮಾರ ನಾಯಕ ಸ್ವಾಮೀಜಿಯವರು ಆದಷ್ಟು ಬೇಗನೆ ಚೇತರಿಸಿಕೊಳ್ಳಲಿದ್ದಾರೆ : ಸಂಸದರು
ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಡಾ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಆರೋಗ್ಯವನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಅವರು ಭೇಟಿ ನೀಡಿ ವಿಚಾರಿಸಿದರು. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ತೆರಳಿ ಶ್ರೀಗಳ ಆರೋಗ್ಯ…
ಅಬ್ಬೆತುಮಕೂರು ಸದ್ಗುರು ಶ್ರೀ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ಸದ್ಗುರು ಆಶೀರ್ವಾದ ಪಡೆದ ಎನ್.ಎಸ್. ಬೋಸರಾಜು
ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರುದಲ್ಲಿರುವ ಅಬ್ಬೆತುಮಕೂರು ಶ್ರೀ ವಿಶ್ವರಾಧ್ಯ ಸುಕ್ಷೇತ್ರದಲ್ಲಿ ಅಣಿಮಾದಿ ಅಷ್ಟಸಿದ್ಧಿ ಪುರುಷ ಭಾವೈಕ್ಯತೆಯ ಭಗವಂತ ಸದ್ಗುರು ಶ್ರೀ ವಿಶ್ವರಾಧ್ಯರ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಮಹೋತ್ಸವದ ಅಂಗವಾಗಿ ಸಣ್ಣ ನೀರಾವರಿ ಹಾಗೂ ವಿಜ್ಞಾನ…
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ
ರಾಯಚೂರು :ಮಂತ್ರಾಲಯದಲ್ಲಿರುವ ಪವಿತ್ರ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿ ರಾಯರ ದಿವ್ಯ ಬೃಂದಾವನದ ಮುಂದೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ (KOF) ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ , ದೇವದುರ್ಗದ…
ಬೆಳಗಾವಿಯಲ್ಲಿ ಸಚಿವರ ಭೇಟಿ – ಕಲ್ಯಾಣ ಕರ್ನಾಟಕ ಮೇಲ್ವಿಚಾರಕರ ಹುದ್ದೆ ಅನ್ಯಾಯ ಕುರಿತು ಮನವಿ
ದಿನಾಂಕ 21/02/2026 ರಂದು ಬೆಳಗಾವಿ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಪುತ್ರರಾದ ಮ್ರಣಾಲ ಹೆಬ್ಬಾಳ್ಕರ್ ಅವರನ್ನು ಅವರ ಕಾರ್ಯಾಲಯ ಹಾಗೂ ನಿವಾಸದಲ್ಲಿ ಭೇಟಿ ಮಾಡಿ, ಹೈದರಾಬಾದ್ ಕರ್ನಾಟಕ (HK) ಪ್ರಸ್ತುತ ಕಲ್ಯಾಣ…
ಬೊಮ್ಮನಹಳ್ಳಿ ಪಿಕೆಪಿಎಸ್ ಗೆ ಸಿದ್ದಪ್ಪ ಕಟ್ಟಿಮನಿ ಆಯ್ಕೆ
ತಾಳಿಕೋಟಿ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಹಿಂದುಳಿದ ವರ್ಗ “ಅ” ಒಂದು ಸ್ಥಾನಕ್ಕೆ ರವಿವಾರ ದಂದು ನಡೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಗ್ರಾಮದ ಸಿದ್ದಪ್ಪ ಬಸಪ್ಪ ಕಟ್ಟಿಮನಿ ಇವರು ಆಯ್ಕೆಯಾದರು. ಸಂಘದ…
ಸೌದಾಗರ್ ಮೌಂಟೇಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಟ್ಯಾಲೆಂಟ್ ಪರೀಕ್ಷೆ
ಸಿಂಧನೂರು : ಫೆಬ್ರವರಿ 22 ರವಿವಾರ ಪಟ್ಟಣದ ಸೌದಾಗರ್ ಮೌಂಟೇಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ “ಟ್ಯಾಲೆಂಟ್ ಪರೀಕ್ಷೆ” ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಅಪಾರ ಉತ್ಸಾಹ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಮೂಡಿಸಿತು. ನಗರದ ವಿವಿಧ ವಾರ್ಡ್‌ಗಳು ಹಾಗೂ ವಿವಿಧ ಶಾಲೆಗಳ ಸುಮಾರು 180ಕ್ಕೂ…
ಪರಿಶ್ರಮ ಮತ್ತು ಶ್ರದ್ಧೆಯಿಂದಲೇ ಸಾಧನೆ ಸಾಧ್ಯ : ಕೆ.ಈ.ನರಸಿಂಹ ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೋಷಕರು ಮಕ್ಕಳ ಸಾಧನೆಗೆ ಪ್ರಮುಖ ಆಧಾರ ಸ್ತಂಭರಾಗಿದ್ದು, ಅವರ ತ್ಯಾಗ ಮತ್ತು ಪ್ರೋತ್ಸಾಹವೇ ವಿದ್ಯಾರ್ಥಿಗಳ ಯಶಸ್ಸಿನ ಬುನಾದಿಯಾಗುತ್ತದೆ. ಆದ್ದರಿಂದ ಎಂದಿಗೂ ತಂದೆ–ತಾಯಿಯ ಮನಸ್ಸು ನೋಯಿಸಬಾರದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮಿ, ಸೋಲು ಬಂದರೆ ನಿರಾಶರಾಗಬೇಡಿ; ಅದನ್ನು ಪಾಠವಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಜಯ ನಿಮ್ಮದೆ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಬಳಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಕಾಲೇಜಿನ ನೆನಪುಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಕಾರ್ಯದರ್ಶಿ ಕೆ.ರಾಜರವಿವರ್ಮಾ, ಡಾ. ಕೆ.ವಿನಯಾ, ಕಾಲೇಜಿನ ಮೇಲ್ವಿಚಾರಕ ಆರೀಫ್ ಹಾಗೂ ಉಪನ್ಯಾಸಕರಾದ ಚಂದ್ರು ಜಾಧವ್, ರಮೇಶ್, ವೀರನಗೌಡ, ಸದ್ದಾಂ, ನಾಗರಾಜ್, ಕಾವ್ಯ, ತ್ರಿವೇಣಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಡಿಜಿಟಲ್ ಪ್ರಾಜೆಕ್ಟರ್ ಅನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.
ಮಾನ್ವಿ : ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು, ಸತತ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದು ಕೆ.ಈ.ನರಸಿಂಹ ಹೇಳಿದರು. ಅವರು ಪಟ್ಟಣದ ನೇತಾಜಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾವುಕ ಹಾಗೂ ಸ್ಮರಣೀಯ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.…
ಕಾರಟಗಿ ಪೊಲೀಸ್ ಇಲಾಖೆಯ ದಂಪತಿಗಳಿಂದ ಕಾರುಣ್ಯಾಶ್ರಮಕ್ಕೆ ಏರ್ ಕೂಲರ್ ವಿತರಣೆ ವಿತರಣೆ ಕಾರುಣ್ಯಾಶ್ರಮವು ನಮ್ಮ ಪೊಲೀಸ್ ಇಲಾಖೆಯ ಪ್ರೀತಿಗೆ ಪಾತ್ರವಾಗಿದೆ – ಶರಣಪ್ಪ ಪೊಲೀಸ್ ಅಧಿಕಾರಿಗಳು
ಸಿಂಧನೂರು- ಫೆ 22 ಕೊಪ್ಪಳ ಜಿಲ್ಲೆಯ ಕಾರಟಿಗಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಜಯಮ್ಮ ಶರಣಪ್ಪ ಈ ಪೊಲೀಸ್ ದಂಪತಿಗಳು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ…
