ರಾಯಚೂರು ಫೆಬ್ರವರಿ 25 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆ ನಿಧಿಯಲ್ಲಿ ಶೇ.29 ಯೋಜನೆಯಲ್ಲಿ ಕೊಟೇಷನ್ ಮುಖಾಂತರ ಖರೀದಿಸಿರುವ ಶವ ಸಂಸ್ಕಾರ ಪೆಟ್ಟಿಗೆಯನ್ನು ಸಫಾಯಿ ಕರ್ಮಚಾರಿ ಜನಾಂಗದವರಿಗೆ ಹಸ್ತಾಂತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಶವ ಸಂಸ್ಕಾರ ಪೆಟ್ಟಿಗೆಯನ್ನು ಇಡುವುದಕ್ಕೆ ಕೊಣೆಯ ವ್ಯವಸ್ಥೆ ಇರತಕ್ಕದ್ದು, ಸಫಾಯಿ ಕರ್ಮಚಾರಿ ಜನಾಂಗಕ್ಕೆ ಮಾತ್ರ ಸೀಮಿತವಾಗಿರುತ್ತದೆ, ಸಫಾಯಿ ಕರ್ಮಚಾರಿ ಜನಾಂಗದ ಸಂಘವು ಸೊಸೈಟಿ ನೋಂದಣಿ ಕಾಯ್ದೆ 1860/ ಟ್ರಸ್ಟ್ ಕಾಯ್ದೆ 1860 ನಲ್ಲಿ ನೋಂದಾಯಿತವಾಗಿರುವವರು ಪಾಲಿಕೆಯ ಡೇ-ನಲ್ಮ್ ವಿಭಾಗಕ್ಕೆ ಫೆ.28ರ ಸಂಜೆ 5ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *