ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರಿನಲ್ಲಿ ನಡೆಯುವ ಅಖಿಲ ಭಾರತ ಗುಡ್ಡಗಾಡು ಓಟ ಪುರುಷ ಮತ್ತು ಮಹಿಳೆಯರ ಚಾಂಪಿಯನ್ ಶಿಪ್ ಗೆ ನಗರದ ಸರ್ಕಾರಿ ಪದವಿ ಕಾಲೇಜಿನ ಪುರುಷರ ವಿಭಾಗದಲ್ಲಿ ಚನ್ನಬಸವ, ಮಹಿಳೆಯರ ವಿಭಾಗದಲ್ಲಿ ಲಕ್ಷ್ಮಿ, ಬಾಳಮ್ಮ, ಲಕ್ಷ್ಮಿ, ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ್ ಡಾ.ಪಾಂಡು ತಿಳಿಸಿದರು. ನವೆಂಬರ್ 5 ರಿಂದ 7ರವರೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಗುಡ್ಡಗಾಡು ಓಟ ಪುರುಷ ಮತ್ತು ಮಹಿಳೆಯರ ಚಾಂಪಿಯನ್ ಶಿಪ್ ನಡೆಯಲಿದ್ದು, ಈ ಚಂಪಿಯನ್ ಶಿಪ್ ಗೆ ನಗರದ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಇವರಿಗೆ ಸರ್ಕಾರಿ ಡಿಗ್ರಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿ ಬಳಗದಿಂದ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ: ಐಕ್ಯೂ ಎಸಿ ಸಂಯೋಜಕರಾದ ಡಾ.ವೈಜನಾಥ ಸಗರಮಠ, ಹಿರಿಯ ಶ್ರೇಣಿ ಗ್ರಂಥಪಾಲಕರಾದ ಯಲ್ಲಪ್ಪ ಗೋನವಾರ, ಪತ್ರಾಂಕಿತ ವ್ಯವಸ್ಥಾಪಕ ಮಮ್ಮದ್ ಸಿದ್ಕಿ, ಸಹಾಯಕ ಪ್ರಾಧ್ಯಾಪಕ ಸೈಯದ್ ಅಜ್ಜರ ಹುಸೇನ್, ಉಪನ್ಯಾಸಕರಾದ ಮರಿಲಿಂಗಪ್ಪ, ವಿಶ್ವನಾಥ ಅರ್ಥಶಾಸ್ತ್ರ ವಿಭಾಗ, ನಿರುಪಾದಿ ಸಹಾಯಕ ಕಚೇರಿ, ಕ್ರೀಡಾ ವಿಭಾಗದ ಸಂಯೋಜಕ ಡಾ.ಲವಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಶಿವ.ಕೆ ಹಾಗೂ ವಿದ್ಯಾರ್ಥಿ ಬೃಂದಾ ಉಪಸ್ಥಿತರಿದ್ದರು.
