Month: January 2026

ಚವನಭಾವಿಯಲ್ಲಿ ವಿಕಸಿತ ಗ್ಯಾರಂಟಿ ರೋಜಗಾರ, ಅಜೀವಿಕಾ ಮಿಷನ್ ವಿಶೇಷ ವಾರ್ಡ ಸಭೆ

ಮುದ್ದೇಬಿಹಾಳ:- ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ 2026–27ನೇ ಸಾಲಿನ ವಿಕಸಿತ ಗ್ಯಾರಂಟಿ ರೋಜಗಾರ ಹಾಗೂ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗಳ ಪಟ್ಟಿ ತಯಾರಿಸುವ ಉದ್ದೇಶದಿಂದ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ವಿಶೇಷ ವಾರ್ಡ ಸಭೆ ನಡೆಸಲಾಯಿತು. ಸಭೆಯನ್ನು…

ಮಸ್ಕಿಯಲ್ಲಿ ಶಕ್ತಿ ಆರಾಧನೆಯ ಮಹಾಸಂಭ್ರಮ | ಶ್ರೀ ಕಾಳಿಕಾದೇವಿಯ 12ನೇ ವಾರ್ಷಿಕೋತ್ಸವ ವೈಭವ

ಮಸ್ಕಿ,ಜ,23:- ಮಸ್ಕಿ ಪಟ್ಟಣದ ಶಕ್ತಿ ದೇವತೆ ಶ್ರೀ ಕಾಳಿಕಾದೇವಿಯ 12ನೇ ವಾರ್ಷಿಕೋತ್ಸವ ಭಕ್ತಿಭಾವ,ಸಂಪ್ರದಾಯ ಹಾಗೂ ಸಂಭ್ರಮದಿಂದ ವಿಜೃಂಭಣೆಯಿ ಜರುಗಿತು. ಶುಕ್ರವಾರ ಬೆಳಿಗ್ಗೆ ನಾನಾ ವಿಧದ ಪುಷ್ಪಾಲಂಕಾರಗಳಿಂದ ಶೃಂಗಾರಗೊಂಡ ಶ್ರೀ ಕಾಳಿಕಾದೇವಿಯ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ವಿಶ್ವಕರ್ಮ ವೃತ್ತ, ಅಶೋಕ ವೃತ್ತ…

ದಾಸಿಮಯ್ಯ ವೃತ್ತ ಉದ್ಘಾಟನೆಗೂ ಸಾಕ್ಷಿಯಾದ ಶಂಕರೋತ್ಸವ | ಸಿಂಪಿ ಸಮಾಜದ ಐತಿಹಾಸಿಕ ಕ್ಷಣ ಮಸ್ಕಿ,ಜ,23 : ಮಸ್ಕಿ ತಾಲ್ಲೂಕಿನಲ್ಲಿ ಸಿಂಪಿ ಸಮಾಜದ ಕುಲ ದೈವ ಶ್ರೀ ಜಡೆಶಂಕರಲಿಂಗ ದೇವರ 26ನೇ ವಾರ್ಷಿಕೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಆಚರಿಸಲಾಯಿತು. ಶ್ರೀ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಕುಂಬೋತ್ಸವದೊಂದಿಗೆ ಶಂಕರ ದೇವರ ಪಲ್ಲಕ್ಕಿ ಉತ್ಸವ ನಗರದೆಲ್ಲೆಡೆ ಸಂಚರಿಸಿತು. ಡೋಳ್ಳಿನ ಸದ್ದು, ಹಾಡು-ಕುಣಿತ, ಭಕ್ತರ ಜಯಘೋಷಗಳ ನಡುವೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ಜನಮನ ಸೆಳೆಯಿತು. ಭಕ್ತರು ಉತ್ಸಾಹದಿಂದ ಭಾಗವಹಿಸಿ ಶ್ರೀ ಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಪಟ್ಟಣದ ಬಳಗಾನೂರು ಕ್ರಾಸ್ ಸಮೀಪ ದಾಸಿಮಯ್ಯ ವೃತ್ತದ ಉದ್ಘಾಟನೆ ಕೂಡ ನೆರವೇರಿತು. ಕಾರ್ಯಕ್ರಮದಲ್ಲಿ ಇಲಕಲ್ಲಿನ ಮಹಾಂತಪ್ಪ ಚೆನ್ನಿ, ಕಮತಗಿಯ ರಾಚಪ್ಪ ಸರಡಗಿ, ಸಿಂಪಿ ಸಮಾಜದ ಹಿರಿಯರು, ಮಸ್ಕಿ ಪುರಸಭೆಯ ಅಧ್ಯಕ್ಷರಾದ ಸುರೇಶ್ ಹರಸೂರ್, ಶ್ರೀಧರ್ ಬಳ್ಳೊಳ್ಳಿ, ದೊಡ್ಡಪ್ಪ ಬುಳ್ಳ, ಪಂಪಣ್ಣ ನಾಗಲಿಕರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಒಟ್ಟಾರೆ ಧಾರ್ಮಿಕ ಭಕ್ತಿ, ಸಾಮಾಜಿಕ ಏಕತೆ ಮತ್ತು ಸಂಸ್ಕೃತಿಯ ವೈಭವವನ್ನು ಸಾರಿದ ಶಂಕರೋತ್ಸವ ಮಸ್ಕಿಯಲ್ಲಿ ವಿಶೇಷ ಛಾಪು ಮೂಡಿಸಿತು. ವರದಿ: ಸುರೇಶ್ ಬಳಗಾನೂರು

ಮಸ್ಕಿ,ಜ,23 : ಮಸ್ಕಿ ತಾಲ್ಲೂಕಿನಲ್ಲಿ ಸಿಂಪಿ ಸಮಾಜದ ಕುಲ ದೈವ ಶ್ರೀ ಜಡೆಶಂಕರಲಿಂಗ ದೇವರ 26ನೇ ವಾರ್ಷಿಕೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಆಚರಿಸಲಾಯಿತು. ಶ್ರೀ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಕುಂಬೋತ್ಸವದೊಂದಿಗೆ ಶಂಕರ ದೇವರ ಪಲ್ಲಕ್ಕಿ ಉತ್ಸವ ನಗರದೆಲ್ಲೆಡೆ ಸಂಚರಿಸಿತು.…

ತಾಲೂಕು ಕುರುಬರ ಸಂಘದ ವತಿಯಿಂದ ಲಿಂ. ಶ್ರೀ ಸಿದ್ದರಾಮಾನಂದಸ್ವಾಮೀಜಿಗಳಿಗೆ ನುಡಿ ನಮನ

ಮಾನ್ವಿ: ಪಟ್ಟಣದ ವಿಶ್ವಜ್ಯೋತಿ ಕನಕದಾಸ ವಸತಿ ನಿಲಯದ ಸಭಾಂಗಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಮಠ ತಿಂತಿಣಿ ಬ್ರಿಜ್ ಲಿಂ. ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಿ ತಾ.ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಅಂಬರೇಶಪ್ಪ ವಕೀಲರು ಮಾತನಾಡಿ…

ಅಸ್ಕಿ ಫೌಂಡೇಶನ್ ಸೇವಾ ಕಾರ್ಯ ಶ್ಲಾಘನೀಯ: ಪಾಟೀಲ

ತಾಳಿಕೋಟಿ: ತಮ್ಮ ಫೌಂಡೇಶನ್ ದ ಮೂಲಕ ಸಮಾಜದಲ್ಲಿರುವ ಬಡವರ ಸೇವೆಯನ್ನು ಪಕ್ಷಾತೀತವಾಗಿ ಮಾಡುತ್ತಿರುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾಘನೀಯವಾಗಿದ್ದು ನಾವೆಲ್ಲರೂ ಅವರಿಗೆ ಪ್ರೋತ್ಸಾಹಿಸಿ ಸಹಕರಿಸುವ ಅಗತ್ಯ ಇದೆ ಎಂದು ಸಹಕಾರಿ ಬ್ಯಾಂಕ್ ನಿರ್ದೇಶಕ ದ್ಯಾಮನಗೌಡ ಪಾಟೀಲ ಹೇಳಿದರು. ಶುಕ್ರವಾರ…

ಸನ್ ರೈಸ್ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ – ಪರಾಕ್ರಮ ದಿನಾಚರಣೆ

ಸನ್ ರೈಸ್ ಡಿ-ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ‘ಪರಾಕ್ರಮ ದಿವಸ’*ವನ್ನಾಗಿ ಅತ್ಯಂತ ಸಡಗರ ಮತ್ತು ಗೌರವದಿಂದ ಆಚರಿಸಲಾಯಿತು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ…

ನೇತಾಜಿಯವರ ತ್ಯಾಗ ಸರ್ವರಿಗೂ ಪ್ರೇರಣೆಯಾಗಿದೆ NS ಪಾಟೀಲ್

ಮಾನ್ವಿ. ಭಾರತವನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಸ್ವತಂತ್ರ ಸೇನೆ ಕಟ್ಟಿದ ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಧೀರ ಸೇನಾನಿ ಭಾರತೀಯರನ್ನು ಬಡಿದಿಬ್ಬಿಸಿದ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುವ ಮೂಲಕ ಕ್ರಾಂತಿಯ ಕಿಚ್ಚು ಹಚ್ಚಿದ ಯುವಜನತೆಯನ್ನು ಬಡಿದೆಬ್ಬಿಸಿದ…

ಕಾರುಣ್ಯಾಶ್ರಮದಲ್ಲಿ ಲಿಂಗೈಕ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮ

ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು – ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಶಿಕ್ಷಣ ಅನ್ನ ಜ್ಞಾನ ದಾಸೋಹಿ ಮೂರ್ತಿಗಳಾಗಿದ್ದರು ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು – ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಸಿಂಧನೂರು — ನಗರದ ಕಾರುಣ್ಯ ವೃದ್ಧಾಶ್ರಮದಲ್ಲಿ…

ರಾಯಚೂರು ಜಿಲ್ಲೆಯನ್ನು ಆನೆಕಾಲು ರೋಗಮುಕ್ತ ಮಾಡಲು, ರಾತ್ರಿ ವೇಳೆಯ ರಕ್ತಲೇಪನ ಕಾರ್ಯಕ್ಕೆ ತಪ್ಪದೆ ಕೈಜೊಡಿಸಿ :ಡಾ ಸುರೇಂದ್ರಬಾಬು.

ರಾಯಚೂರು ಜಿಲ್ಲೆಯಲ್ಲಿ ಆನೆಕಾಲು ರೋಗದ ಹೊಸ ಪ್ರಕರಣಗಳ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗ ಪತ್ತೆ ಹಚ್ಚಲು, ಆಯ್ದ ಗ್ರಾಮಗಳು, ವಲಸೆ ಪ್ರದೇಶಗಳಲ್ಲಿ ರೋಗ ಪತ್ತೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಕೀಯ ತಂಡ ರಾತ್ರಿ ವೇಳೆ ಕೈಗೊಳ್ಳುವ ರಕ್ತ ಲೇಪನ ಕಾರ್ಯಕ್ಕೆ…

ತಾಲೂಕು ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

ಸಿಂಧನೂರು : ತಾಲೂಕು ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಉದ್ದೇಶ ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಕಾರ್ಯಕ್ರಮದಲ್ಲಿ ಮಾನ್ಯ ತಹಶೀಲ್ದಾರ್ ಶ್ರೀ ಅರುಣಕುಮಾರ್ ದೇಸಾಯಿ ಅವರು ಮಾತನಾಡಿ, ಮತದಾನದ…