ಮಾನ್ವಿ: ಪಟ್ಟಣದ ವಿಶ್ವಜ್ಯೋತಿ ಕನಕದಾಸ ವಸತಿ ನಿಲಯದ ಸಭಾಂಗಣದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಮಠ ತಿಂತಿಣಿ ಬ್ರಿಜ್ ಲಿಂ. ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಿ ತಾ.ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಕೆ.ಅಂಬರೇಶಪ್ಪ ವಕೀಲರು ಮಾತನಾಡಿ ಲಿಂ. ಶ್ರೀ ಸಿದ್ದರಾಮಾನಂದ ಸ್ವಾಮೀಜಿಗಳು ತಿಂತಿಣಿ ಬ್ರಿಜ್ ಹತ್ತಿರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಮಠವನ್ನು ಕಟ್ಟಿ ನಿರಂತರವಾಗಿ ಹಾಲುಮತ ವೈಭವ ಕಾರ್ಯಕ್ರಮವನ್ನು ಎಲ್ಲಾ ಜಾತಿ ಧರ್ಮದವರನ್ನು ಒಳಗೊಂಡತೆ ಅಯೋಜಿಸುವ ಮೂಲಕ ನಮ್ಮ ಕುರುಬ ಸಮಾಜವನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡಿದರು. ಶ್ರೀಗಳು ಕೇವಲ ಹಾಲುಮತ ಸಮುದಾಯಕ್ಕೆ ಮಾತ್ರ ಸಿಮೀತರಾಗದ ಸಮಾಜದ ಎಲ್ಲಾ ವರ್ಗದ ಜನರಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು ಅವರು ಮಾನ್ವಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚಾರಿಸಿ ಪ್ರವಚನವನ್ನು ನೀಡುವ ಮೂಲಕ ಎಲ್ಲಾ ಸಮುದಾಯದವರು ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನವನ್ನು ನೀಡಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ತಾ.ಅಧ್ಯಕ್ಷ ಸತ್ಯನಾರಾಯಣ ವಕೀಲರು ಮುಷ್ಟೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೀರಪ್ಪಪೂಜಾರಿ ಹಳ್ಳಿಹೊಸುರ್, ಬೀರಪ್ಪಪೂಜಾರಿ ಮುಷ್ಟೂರು, ಬಿ.ಕೆ.ಅಮರೇಶಪ್ಪ, ಕೆ.ಬಸವಂತಪ್ಪ, ಡಾ,ಯಂಕನಗೌಡ ಪಾಟೀಲ್ ಬೊಮ್ಮನಾಳ,ಡಿ.ವೆಂಕಟೇಶಪ್ಪ, ಬಸವರರಾಜ ಭೋಗವತಿ, ಈರಣ್ಣ ಮಾರ್ಲಟ್ಟಿ, ಬಸವರಾಜ ಕನ್ನಾರಿ, ರಾಹುಲ್ ಕಲಂಗೇರಾ, ಶಿವಶಂಕರ್ ಗೌಡ ಬಾಗಲವಾಡ್, ಅಜಯಕುಮಾರ್,ದುರುಗಪ್ಪ ತಡಕಲ್ ,ವಿಜಯಕುಮಾರ್ ಸಾಹುಕಾರ್ ಉದ್ಬಳ,ವೆಂಕನಗೌಡ ನಿವೃತ್ತ ಎ.ಎಸ್.ಐ. ಬೊಮ್ಮನಾಳ,ಬಸವರಾಜ್, ಹನುಮಂತ ಗೌಡ ಬೊಮ್ಮನಾಳ,ಭೀಮನಗೌಡ ಮುಷ್ಟೂರು,ಮಹಾಂತೇಶ ಒಲೇಕರ್,ಮಹದೇವಪ್ಪ ಹಳ್ಳಿಹೊಸೂರ,ಅಯ್ಯಪ್ಪ ಮೇಟಿ ಉದ್ಬಳ,ದೇವೇಗೌಡ ಉದ್ಬಳ,ಹನುಮಂತ.ಡಿ.ಗುರಿಕಾರ, ಪವನಕುಮಾರ್ ಪೂಜಾರಿ ಹರವಿ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದರು.

Leave a Reply

Your email address will not be published. Required fields are marked *