ದಾಸಿಮಯ್ಯ ವೃತ್ತ ಉದ್ಘಾಟನೆಗೂ ಸಾಕ್ಷಿಯಾದ ಶಂಕರೋತ್ಸವ | ಸಿಂಪಿ ಸಮಾಜದ ಐತಿಹಾಸಿಕ ಕ್ಷಣ ಮಸ್ಕಿ,ಜ,23 : ಮಸ್ಕಿ ತಾಲ್ಲೂಕಿನಲ್ಲಿ ಸಿಂಪಿ ಸಮಾಜದ ಕುಲ ದೈವ ಶ್ರೀ ಜಡೆಶಂಕರಲಿಂಗ ದೇವರ 26ನೇ ವಾರ್ಷಿಕೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಆಚರಿಸಲಾಯಿತು. ಶ್ರೀ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಕುಂಬೋತ್ಸವದೊಂದಿಗೆ ಶಂಕರ ದೇವರ ಪಲ್ಲಕ್ಕಿ ಉತ್ಸವ ನಗರದೆಲ್ಲೆಡೆ ಸಂಚರಿಸಿತು. ಡೋಳ್ಳಿನ ಸದ್ದು, ಹಾಡು-ಕುಣಿತ, ಭಕ್ತರ ಜಯಘೋಷಗಳ ನಡುವೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ಜನಮನ ಸೆಳೆಯಿತು. ಭಕ್ತರು ಉತ್ಸಾಹದಿಂದ ಭಾಗವಹಿಸಿ ಶ್ರೀ ಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಪಟ್ಟಣದ ಬಳಗಾನೂರು ಕ್ರಾಸ್ ಸಮೀಪ ದಾಸಿಮಯ್ಯ ವೃತ್ತದ ಉದ್ಘಾಟನೆ ಕೂಡ ನೆರವೇರಿತು. ಕಾರ್ಯಕ್ರಮದಲ್ಲಿ ಇಲಕಲ್ಲಿನ ಮಹಾಂತಪ್ಪ ಚೆನ್ನಿ, ಕಮತಗಿಯ ರಾಚಪ್ಪ ಸರಡಗಿ, ಸಿಂಪಿ ಸಮಾಜದ ಹಿರಿಯರು, ಮಸ್ಕಿ ಪುರಸಭೆಯ ಅಧ್ಯಕ್ಷರಾದ ಸುರೇಶ್ ಹರಸೂರ್, ಶ್ರೀಧರ್ ಬಳ್ಳೊಳ್ಳಿ, ದೊಡ್ಡಪ್ಪ ಬುಳ್ಳ, ಪಂಪಣ್ಣ ನಾಗಲಿಕರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಒಟ್ಟಾರೆ ಧಾರ್ಮಿಕ ಭಕ್ತಿ, ಸಾಮಾಜಿಕ ಏಕತೆ ಮತ್ತು ಸಂಸ್ಕೃತಿಯ ವೈಭವವನ್ನು ಸಾರಿದ ಶಂಕರೋತ್ಸವ ಮಸ್ಕಿಯಲ್ಲಿ ವಿಶೇಷ ಛಾಪು ಮೂಡಿಸಿತು. ವರದಿ: ಸುರೇಶ್ ಬಳಗಾನೂರು

Bynaijyadese

Jan 25, 2026

ಮಸ್ಕಿ,ಜ,23 : ಮಸ್ಕಿ ತಾಲ್ಲೂಕಿನಲ್ಲಿ ಸಿಂಪಿ ಸಮಾಜದ ಕುಲ ದೈವ ಶ್ರೀ ಜಡೆಶಂಕರಲಿಂಗ ದೇವರ 26ನೇ ವಾರ್ಷಿಕೋತ್ಸವವನ್ನು ಅತ್ಯಂತ ಅದ್ಧೂರಿ ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಆಚರಿಸಲಾಯಿತು.

ಶ್ರೀ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಕುಂಬೋತ್ಸವದೊಂದಿಗೆ ಶಂಕರ ದೇವರ ಪಲ್ಲಕ್ಕಿ ಉತ್ಸವ ನಗರದೆಲ್ಲೆಡೆ ಸಂಚರಿಸಿತು. ಡೋಳ್ಳಿನ ಸದ್ದು, ಹಾಡು-ಕುಣಿತ, ಭಕ್ತರ ಜಯಘೋಷಗಳ ನಡುವೆ ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆ ಜನಮನ ಸೆಳೆಯಿತು. ಭಕ್ತರು ಉತ್ಸಾಹದಿಂದ ಭಾಗವಹಿಸಿ ಶ್ರೀ ಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಪಟ್ಟಣದ ಬಳಗಾನೂರು ಕ್ರಾಸ್ ಸಮೀಪ ದಾಸಿಮಯ್ಯ ವೃತ್ತದ ಉದ್ಘಾಟನೆ ಕೂಡ ನೆರವೇರಿತು.

ಕಾರ್ಯಕ್ರಮದಲ್ಲಿ ಇಲಕಲ್ಲಿನ ಮಹಾಂತಪ್ಪ ಚೆನ್ನಿ, ಕಮತಗಿಯ ರಾಚಪ್ಪ ಸರಡಗಿ, ಸಿಂಪಿ ಸಮಾಜದ ಹಿರಿಯರು,

ಮಸ್ಕಿ ಪುರಸಭೆಯ ಅಧ್ಯಕ್ಷರಾದ ಸುರೇಶ್ ಹರಸೂರ್, ಶ್ರೀಧರ್ ಬಳ್ಳೊಳ್ಳಿ, ದೊಡ್ಡಪ್ಪ ಬುಳ್ಳ, ಪಂಪಣ್ಣ ನಾಗಲಿಕರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಒಟ್ಟಾರೆ ಧಾರ್ಮಿಕ ಭಕ್ತಿ, ಸಾಮಾಜಿಕ ಏಕತೆ ಮತ್ತು ಸಂಸ್ಕೃತಿಯ ವೈಭವವನ್ನು ಸಾರಿದ ಶಂಕರೋತ್ಸವ ಮಸ್ಕಿಯಲ್ಲಿ ವಿಶೇಷ ಛಾಪು ಮೂಡಿಸಿತು.

ವರದಿ: ಸುರೇಶ್ ಬಳಗಾನೂರು

Leave a Reply

Your email address will not be published. Required fields are marked *