ಮಾನ್ವಿ. ಭಾರತವನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಸ್ವತಂತ್ರ ಸೇನೆ ಕಟ್ಟಿದ ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಧೀರ ಸೇನಾನಿ ಭಾರತೀಯರನ್ನು ಬಡಿದಿಬ್ಬಿಸಿದ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎನ್ನುವ ಮೂಲಕ ಕ್ರಾಂತಿಯ ಕಿಚ್ಚು ಹಚ್ಚಿದ ಯುವಜನತೆಯನ್ನು ಬಡಿದೆಬ್ಬಿಸಿದ ಸ್ವಾತಂತ್ರ್ಯಕ್ಕಾಗಿ ತೋರಿದ ಪರಾಕ್ರಮ ತ್ಯಾಗ ಅಮರ ಅಂತಹ ಧೀರ ಸೇನಾ ನಿಯ ಜಯಂತಿಯನ್ನು ನಾವು ನಮ್ಮ ಗ್ರಾಮದಲ್ಲಿ ಬಹಳ ಸರಳ ರೀತಿಯಲ್ಲಿ ನನ್ನ ನೆಚ್ಚಿನ ಗ್ರಾಮದ ಯುವಕರ ಜೊತೆ ಆಚರಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ ನೇತಾಜಿಯವರ ತ್ಯಾಗ ಸರ್ವರಿಗೂ ಪ್ರೇರಣೆಯಾಗಿದೆ ಎಂದು ಗ್ರಾಮದ ಹಿರಿಯ ಮುಖಂಡರಾದ ನಾಗನಗೌಡ ಪೋಲೀಸ್ ಪಾಟೀಲ್ ತಮ್ಮ ಅನಿಸಿಕೆಯನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ನೀರಮಾನ್ವಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಇಂದು ಗ್ರಾಮದ ದೇಶಭಕ್ತರ ಜೊತೆ ಹಾಗೂ ಪಿ ಎಂ ಶ್ರೀ ಸರಕಾರಿ ಶಾಲೆಯ ಮಕ್ಕಳ ಜೊತೆ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಿ ಎಂ ಶ್ರೀ ಶಾಲೆಯ ವಿದ್ಯಾರ್ಥಿಗಳು ಸಂಗೀತ ಶಿಕ್ಷಕರು ಗ್ರಾಮದ ಗಂಟೆಯ್ಯದೊರೆ ರಂಗನಾಥ ದೊರೆ ಪಡಯ್ಯ ಸ್ವಾಮಿ ಯಲ್ಲಯ್ಯ ದೊರೆ ಜೆ ವೀರೇಶ ಗ್ರಂಥಪಾಲಕ ರಂಗನಾಥ ಗೌಡ ಉಪಸ್ಥಿತಿ ಇದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು

