ತಾಳಿಕೋಟಿ: ತಮ್ಮ ಫೌಂಡೇಶನ್ ದ ಮೂಲಕ ಸಮಾಜದಲ್ಲಿರುವ ಬಡವರ ಸೇವೆಯನ್ನು ಪಕ್ಷಾತೀತವಾಗಿ ಮಾಡುತ್ತಿರುವ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರ ಕಾರ್ಯ ಶ್ಲಾಘನೀಯವಾಗಿದ್ದು ನಾವೆಲ್ಲರೂ ಅವರಿಗೆ ಪ್ರೋತ್ಸಾಹಿಸಿ ಸಹಕರಿಸುವ ಅಗತ್ಯ ಇದೆ ಎಂದು ಸಹಕಾರಿ ಬ್ಯಾಂಕ್ ನಿರ್ದೇಶಕ ದ್ಯಾಮನಗೌಡ ಪಾಟೀಲ ಹೇಳಿದರು. ಶುಕ್ರವಾರ ತಾಲೂಕಿನ ಮಿಣಜಗಿ ಗ್ರಾಮದ ಶ್ರೀ ಮಾಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಸಿ.ಬಿ.ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಹಮ್ಮಿಕೊಂಡ ನೂತನ ಕ್ಯಾಲೆಂಡರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫೌಂಡೇಶನ್ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ಅವರು ಗ್ರಾಮಸ್ಥರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಮತಕ್ಷೇತ್ರದ ಪ್ರತಿಮನೆಗೂ ಈ ವರ್ಷದ ನೂತನ ಕ್ಯಾಲೆಂಡರ್ ತಲುಪಿಸುವ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ಕೆಲಸ ಮಾಡುತ್ತಿದೆ ಈ ವರ್ಷದ ಕ್ಯಾಲೆಂಡರ್ ವಿಶೇಷ ಹಾಗೂ ವಿನೂತನವಾಗಿದ್ದು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ ಎಂದು ತಿಳಿಸಿದ ಅವರು ಭಗವಂತನ ಕೃಪೆ ಹಾಗೂ ನಿಮ್ಮೆಲ್ಲರ ಸಹಕಾರದಿಂದ ನಾನು ನನ್ನಿಂದ ಸಾಧ್ಯವಾದಷ್ಟು ಸೇವೆಯನ್ನು ಮಾಡುತ್ತಿದ್ದೇನೆ ನನಗೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತಾಗಲು ತಾವುಗಳು ನನಗೆ ಶಕ್ತಿಯನ್ನು ನೀಡಬೇಕು ಎಂದರು. ಮುಖಂಡ ಎಂ.ಎನ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಜಗನಪ್ಪಗೌಡ ಪಾಟೀಲ,ಬಿ.ಎಂ.ಬಿರಾದಾರ, ಶಶಿಧರ ಬೆಣ್ಣೂರ,ಬಿ.ಎಚ್.ಬಾಗೇವಾಡಿ, ಎಂ. ಎನ್.ಬಿರಾದಾರ, ಎ.ಎಂ.ಸರ್ಜಾಪುರ, ವೀರೇಶ ಬಾಗೇವಾಡಿ, ಬಿ.ಎಸ್. ಪಾಟೀಲ,ಬಿ.ಎಸ್.ಯೆರನಾಳ, ಈರಣ್ಣ ತೆಕುರ,ಬಿ.ಎಸ್.ಬಿರಾದಾರ, ಮಹಾಂತೇಶ ಬಿರಾದಾರ, ಎಂ.ಜೆ. ಪಾಟೀಲ, ಸಾಹೇಬಣ್ಣ ಅಗ್ನಿ, ಬಾಬುಗೌಡ ಪಾಟೀಲ, ಬೀರಪ್ಪ ಮಂಗ್ಯಾಳ, ಆರ್ ಎಸ್ ಪೂಜಾರಿ, ಬಿ.ಜೆ.ಪೂಜಾರಿ, ಕಾಂಗ್ರೆಸ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಸಂಗನಗೌಡ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.


