ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು – ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು
ಶಿಕ್ಷಣ ಅನ್ನ ಜ್ಞಾನ ದಾಸೋಹಿ ಮೂರ್ತಿಗಳಾಗಿದ್ದರು ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು – ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು
ಸಿಂಧನೂರು — ನಗರದ ಕಾರುಣ್ಯ ವೃದ್ಧಾಶ್ರಮದಲ್ಲಿ ಕಾಗಿನೆಲೆ ಮಹಾ ಸಂಸ್ಥಾನದ ತಿಂಥಿಣಿ ಬ್ರೀಜ್ ಶಾಖಾ ಮಠದ ಪೀಠಾಧಿಪತಿಗಳಾಗಿದ್ದ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಶಿಕ್ಷಣ ಅನ್ನ ಜ್ಞಾನ ದಾಸೋಹ ಮೂರ್ತಿಗಳಾಗಿದ್ದರು. ಅವರು ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡಿದ್ದರು. ಅವರನ್ನು ಕಳೆದುಕೊಂಡ ನಾವು ನೀವೆಲ್ಲರೂ ಅವರ ಕನಸನ್ನು ನನಸಾಗಿಸಬೇಕಾಗಿದೆ. ಮತ್ತು ವಿಶೇಷವಾಗಿ ಸುಮಾರು ವರ್ಷಗಳಿಂದ ಹಾಲುಮತ ಸಂಸ್ಕೃತಿಯ ವೈಭವ ನಾಡಿಗೆ ತೋರಿಸಿಕೊಟ್ಟಂತಹ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಬಹಳ ಸರಳ ವ್ಯಕ್ತಿತ್ವ ಹೊಂದಿದ್ದ ಶ್ರೀ ಗಳು ಶರಣ ಸಂಸ್ಕೃತಿಗೆ ಸಂಪೂರ್ಣ ಅರ್ಥವನ್ನು ಕಲ್ಪಿಸಿ ಕೊಟ್ಟಿರುವ ಮಹಾನುಭಾವರು ಮತ್ತು ನೊಂದವರ ಕಷ್ಟಗಳಿಗೆ ನೆರಳಾಗುವ ಮೂಲಕ ಭಕ್ತ ಸಂಕುಲವನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಹಲವಾರು ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅಪರೂಪದ ಶರಣರಾಗಿದ್ದವರು ನಮ್ಮ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬ ಭಕ್ತರು ಮೈಗೂಡಿಸಿಕೊಂಡು ಇಷ್ಟು ವರ್ಷಗಳ ಕಾಲ ನಡೆಸಿಕೊಂಡು ಒಗ್ಗಟ್ಟಿನಿಂದ ಬಾಳಿ ಬದುಕಬೇಕು ಎಂದು ಕರಿ ಬಸವ ನಗರ ಮೂರನೇ ಕ್ಯಾಂಪ್ ಹಾಗೂ ಕನ್ನೂರಿನ ಶ್ರೀಮದ್ ಜಗದ್ಗುರು ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಷ. ಬ್ರ. ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳಿಗೆ ನುಡಿ ನಮನ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಪಿ.ಡಬ್ಲ್ಯೂ.ಡಿ.ಕ್ಯಾಂಪ್ ಸಿಂಧನೂರು ಶ್ರೀ ಶಾಂಭವಿ ಪುಣ್ಯಾಶ್ರಮ ಪಿ.ಡಬ್ಲ್ಯೂ.ಡಿ ಕ್ಯಾಂಪ್ ಸಿಂಧನೂರು ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಇವರುಗಳ ವತಿಯಿಂದ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾಗಿನೆಲೆ ಮಹಾ ಸಂಸ್ಥಾನ ಕಲ್ಬುರ್ಗಿ ವಿಭಾಗದ ತಿಂಥಿಣಿ ಬ್ರಿಜ್ ನ ಶಾಖಾ ಮಠದ ಲಿಂಗೈಕ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನುಡಿ ನಮನ ಕಾರ್ಯಕ್ರಮ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾಳಪ್ಪ ಮಾಡಗಿರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಿದ್ದರಾಮಾನಂದಪುರಿ ಸ್ವಾಮಿಗಳು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯುತ್ತೇವೆ ಎಂದು ಮಾತನಾಡಿದರು. ನಂತರ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ನಾಗವೇಣಿ.ಎಸ್. ಪಾಟೀಲ್ ಮಾತನಾಡಿ ಶ್ರೀಗಳು ಬರೀ ಹಾಲುಮತ ಸಮಾಜಕ್ಕೆ ಅಷ್ಟೇ ಮೀಸಲಾಗದೆ ಸರ್ವ ಸಮಾಜದ ಪ್ರೀತಿಯನ್ನು ಗಳಿಸಿದ್ದರು ಇಂತಹ ಶರಣರು ತೋರಿಸಿಕೊಟ್ಟಿರುವ ಮಾರ್ಗವನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ. ಶ್ರೀಗಳ ಸರಳ ವ್ಯಕ್ತಿತ್ವ ಅವರ ಆದರ್ಶವೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗಿದೆ. ನೊಂದವರಿಗೆ ನಾಡಿಮಿಡಿತವಾಗಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವುದಲ್ಲದೆ ಸಂಸ್ಕಾರದ ಪಾಠವನ್ನು ಉಣಬಡಿಸಿ ಶುದ್ಧ ಸಮಾಜಕ್ಕೆ ಕಾರಣರಾಗಿದ್ದರು. ಇನ್ನು ಮುಂದೆ ಅವರ ನೆನಪನ್ನು ಮಾಡಿಕೊಳ್ಳದೆ ಅವರ ಕನಸುಗಳನ್ನು ಈಡೇರಿಸುವ ಭಕ್ತರು ನಾವಾಗಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಿಂಧನೂರಿನ ಶ್ರೀ ಶಾಂಭವಿ ಪುಣ್ಯಾಶ್ರಮದ ಪೀಠಾಧಿಪತಿಗಳಾದ ವೇ. ಮೂ. ವೀರೇಶ ಯಡಿಯೂರು ಮಠ. ಹಾಗೂ ಹುಚ್ಚಪ್ಪ ಪೂಜಾರಿ ಸುಕಾಲಪೇಟೆ ಇವರುಗಳು ಸಾನಿಧ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹೊಸಗೇರಪ್ಪ ಗೊರೆಬಾಳ ಅಧ್ಯಕ್ಷರು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಸಿಂಧನೂರು. ಮಾಳಪ್ಪ ಮಾಡಗಿರಿ ಸದಸ್ಯರು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿ ಸಿಂಧನೂರು. ಮೂಕಪ್ಪ ಬನ್ನದ ಸದಸ್ಯರು ಶ್ರೀ ಹುಲಿಗಮ್ಮ ದೇವಿ ದೇವಸ್ಥಾನ ಸಮಿತಿ, ಸಿಂಧನೂರು. ಶಿವಶರಣಯ್ಯ ಸ್ವಾಮಿ ಗುರುವಿನ ಮಠ ಸಿಂಧನೂರು. ಅನ್ವರ್ ಸಾಬ್ ಬಳಗಾನೂರು ಸಾ. ಸಿಂಧನೂರು. ಹನುಮಂತಪ್ಪ ಮಾಡಿಸಿರವಾರ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ ಜ್ಯೋತಿ.ಹಾಗೂ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಸಮಿತಿಯ ಸದಸ್ಯರುಗಳು ಮತ್ತು ಹಾಲುಮತ ಸಮಾಜದ ಗುರು ಹಿರಿಯರುಗಳು ಉಪಸ್ಥಿತರಿದ್ದರು


