ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡದಿದ್ದರೆ ಉಗ್ರ ಹೋರಾಟ. ಬೀದಿ ಬದಿ ವ್ಯಾಪಾರಿಗಳಿಂದ ಜ.3ಕ್ಕೆ ಸಿಎಂ, ಡಿಸಿಎಂಗೆ ಘೆರಾವ್, ಕಪ್ಪು ಪಟ್ಟಿ ಪ್ರದರ್ಶನದ ಎಚ್ಚರಿಕೆ.
ಸಿಂಧನೂರು ಬೀದಿ ವ್ಯಾಪಾರಿಗಳ ಜೀವನವನ್ನು ಧ್ವಂಸಗೊಳಿಸಿ, ಒಂದು ವರ್ಷವೇ ಗತಿಸಿ ಹೋಯಿತು. ಕಳೆದ ವರ್ಷ 2024ರ ಡಿ.24 ರಂದು ನಗರದ ಸಾವಿರಾರು ವ್ಯಾಪಾರಿಗಳ ಬದುಕುವ ಹಕ್ಕುಗಳನ್ನು ಕಿತ್ತಿಕೊಳ್ಳಲಾಯಿತು. ಜಿಲ್ಲಾಧಿಕಾರಿ ನಿತೀಶ್, ತಾಲೂಕು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ, ಹಾಗೂ ಪೌರಾಯುಕ್ತ ಮಂಜುನಾಥ…
