ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಷ.ಬ್ರ.ಶ್ರೀ ರಾಜ ಗುರುರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ನಡೆಸುತ್ತಿರುವ ಧರ್ಮ ಜಾಗೃತಿ ಕಾರ್ಯಗಳಿಗಾಗಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಶ್ರೀಮಠದಲ್ಲಿ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಪುರಾಣ ಕಾರ್ಯಕ್ರಮದ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮದಲ್ಲಿ ಅವರಿಗೆ ಈ ಗೌರವ ಸಮರ್ಪಣೆಯನ್ನು ಕೊಂಡಗೂಳಿಯ ಪರಮ ಪೂಜ್ಯ ಶಂಕರಾನಂದ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ,ಡಾ.ಸೋಮಶೇಖರಯ್ಯ ಹಿರೇಮಠ,ಸಾಹಿತಿ ಬಸವರಾಜ ಗೊರಜಿ, ಮಾತೋಶ್ರೀ ರೇಣುಕಾ ಹಾಗೂ ಶೋಭಾ ಅಮ್ಮನವರು,ಡಾ.ಎಸ್.ಎಸ್.ದೇಸಾಯಿ,ಸುರೇಶ ದಿನ್ನಿಬಾಯಿ,
ಪುರಾಣಿಕ ರಾಚಯ್ಯ ಹಿರೇಮಠ,ಗ್ರಾಮದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *