ಮಾನ್ವಿ : ಪಟ್ಟಣದ ಸರಕಾರಿ ಹಣ್ಣಿನ ತೋಟದಲ್ಲಿ 21 ದಿನಗಳ ಕಾಲ ಉಚಿತ ಯೋಗ ಶಿಬಿರದ ಮುಕ್ತಾಯ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಮಾನ್ವಿಯ ಖ್ಯಾತ ವೈದ್ಯರಾದ ಡಾ!! ರಾಘವೇಂದ್ರ ಅವರು ಮಾತನಾಡಿ” ಕೂಡಿಸುವ ಕೆಲಸ ಕೆಲವೇ ವ್ಯಕ್ತಿಗಳಿಂದ ಆಗುತ್ತದೆ ಹಾಗೂ ದೇಹ ಮತ್ತು ಮನಸ್ಸು ಗಟ್ಟಿಯಾಗಿರಬೇಕಾದರೆ ನಾವು ನಿತ್ಯ ಯೋಗ ಅಭ್ಯಾಸದಲ್ಲಿ ಇದ್ದಾಗ ಮಾತ್ರ ಸದೃಢ ದೇಹ ಸದೃಢ ಮನಸ್ಸು ಸಾಧ್ಯ ಎಂದು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ತಿಳಿಸಿದರು. ಈ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದಂತಹ ಡಾ!!ವಿಕ್ರಮ್ ಯೋಗ ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿದೆ ಅದರ ಮಹತ್ವ ಎಲ್ಲರೂ ಅರಿತಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ತಮ್ಮ ಅತಿಥಿ ಭಾಷಣದಲ್ಲಿ ಮಾತನಾಡಿದರು. ಹಾಗೂ ಇನ್ನೋರ್ವ ಅತಿಥಿಯಾಗಿ ವಿದ್ಯಾಸಾಗರ್ ಭಾರತ ಸೇವಾದಳ ರಾಯಚೂರು ಒಕ್ಕಟಿನಿಂದ ಸೇರಿದಾಗ ಮಾತ್ರ ಯಶಸ್ಸು ಆಗುತ್ತದೆ ಹಾಗೂ ಎಲ್ಲರೂ ಸೇರಿ ಯೋಗ ಮಾಡಿದಾಗ ಸಾರ್ಥಕ ಬದುಕು ಆಗುತ್ತದೆ ಎಂದು ಹೇಳಿದರು ಈ ಒಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಅಲಂಕರಿಸಿದಂತಹ ಶ್ರೀಶೈಲ ಗೌಡ್ರು ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ.ಹುಟ್ಟು ಮತ್ತು ಸಾವುಗಳ ಮಧ್ಯೆ ಇರುವದೇ ಸುಂದರವಾದ ಜೀವನ.ಈ ಸುಂದರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಬೇಕಾದರೆ ಉತ್ತಮ ಹವ್ಯಾಸಗಳು ಹಾಗೂ ಉತ್ತಮ ಆಹಾರವನ್ನು ಸೇವಿಸಬೇಕು ಹಾಗೂ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಬೇಕು ಜೀವನದಲ್ಲಿ ಎಲ್ಲವನ್ನು ಹಣದಿಂದ ಗಳಿಸಬಹುದು ಆದರೆ ಹೆತ್ತ ತಂದೆ ತಾಯಿಗಳು ಮತ್ತು ಆರೋಗ್ಯವನ್ನು ಏನು ಕೊಟ್ಟರು ಸಹ ಗಳಿಸಲು ಸಾಧ್ಯವಿಲ್ಲ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾಸ್ತವಿಕವಾಗಿ ಮಾತುಗಳನ್ನು ಬಸವರಾಜ್ ಶೆಟ್ಟಿ ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಆರೋಗ್ಯ ಇರಲು ಸಾಧ್ಯ ಎಂದು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಮೌನ ಮಿತ್ರ ಯೋಗ ಸಮಿತಿಯ ಎಲ್ಲಾ ಯೋಗ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸಿದ್ದ ಮಲ್ಲಯ್ಯ ಹಿರೇಮಠ ನಿರೂಪಿಸಿದರು.ಪ್ರಾರ್ಥನೆ ಗೀತೆ ದಿನ್ನಿ ರಮೇಶ್ ಹಾಡಿದರು . ಶಂಕರನಂದ ಸ್ವಾಮಿ ಸ್ವಾಗತಿಸಿದರು.ಮೌನ ಮಿತ್ರ ಯೋಗ ಗುರುಗಳಾದಂತಹ ಮೌನೇಶ್ ಪೋತ್ನಾಳ ಸರ್ ವಂದಿಸಿದರು.

