ಮಸ್ಕಿ: ಪಟ್ಟಣದ ಜಾಮೀಯಾ ಮಸೀದಿಗೆ ಜಿಲ್ಲಾ ವಕ್ಫ್ಬೋರ್ಡ್ ಮುಖ್ಯಕಾರ್ಯ ನಿರ್ವಾಹಕಾಧಿಕಾರಿ ಹಲೀಮುದ್ದೀನ್ ಭೇಟಿ ಕಾಮಗಾರಿಯನ್ನು ಪರಿಶೀಲಿಸಿದರು. ಮಸೀದಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ರಾಜ್ಯ ವಕ್ಫ್ಬೋರ್ಡ್ ಸಮಿತಿ ಆದೇಶ ದಂತೆ ಜಾಮೀಯಾ ಮಸೀದಿ ಹಳೆ ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಹೊಸ ಕಟ್ಟಡ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಜಾಮೀಯಾ ಮಸೀದಿ ಕಮೀಟಿ ಅಧ್ಯಕ್ಷ ಮಹ್ಮದ್‌ಸಾಬ್ ಮಕಾನದಾರ ಅಧಿಕಾರಿ ಗಮನಕ್ಕೆ ತಂದರು. ನಂತರ ಜಿಲ್ಲಾ ವಕ್ಫ್ಬೋರ್ಡ್ ಸಿಇಒ ಹಲೀಮುದ್ದಿನ್ ಮಾತನಾಡಿ, ಮಸೀದಿ ಕಟ್ಟಡಕ್ಕೆ ರಾಜ್ಯ ವಕ್ಫ್ ಸಮಿತಿ ಅನುದಾನ ನೀಡಲಿದ್ದು, ಅಗತ್ಯ ದಾಖಲೆ ಪ್ರಮಾಣ ಪತ್ರಗಳನ್ನು ನೀಡಿದರೆ ರಾಜ್ಯ ಸಮಿತಿಗೆ ಅನುದಾನ ನೀಡಲು ಶಿಫಾರಸ್ಸು ಮಾಡಲಾಗುತ್ತದೆ ಎಂದಯ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಕಮೀಟಿ ಸದಸ್ಯರು ಸಿಇಒ ಅವರಿಗೆ ಸನ್ಮಾನಿಸಿದರು. ಕಮೀಟಿ ಕಾರ್ಯದರ್ಶಿ ರಿಯಾಜ್ ಖಾಜಿ, ಅಬ್ದುಲ್ ಗನಿ ಬಳ್ಳಾರಿ, ಹಸನ್‌ಸಾಬ್ ಬ್ಯಾಂಕ್, ಬಾಬುಸಾಬ್ ಛತ್ರಿ, ಅಬ್ದುಲ್ ಅಜೀಜ್ ಇದ್ದರು.

