ಮಸ್ಕಿ: ಛಲವಾದಿ ಮಹಾಸಭಾ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ನಾಗಲಿಂಸ್ವಾಮಿ ತಿಳಿಸಿದರು.
ಪಟ್ಟಣದ ತುಂಗಭದ್ರ ಎಡದಂಡೆ ನಾಲೆಯ ಪಕ್ಕದಲ್ಲಿರುವ ಸರ್ಕಿಟ್‌ಹೌಸ್‌ನಲ್ಲಿ ಶನಿವಾರ ಸಮಾಜದವರ ಸಭೆ ನಡೆಸಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ ಎಂದು ತಿಳಿಸಿದರು.
ನೂತನ ಪದಾಧಿಕಾರಿಗಳು: ಮೌನೇಶ ದೊಡ್ಡಮನಿ ಅಮೀನಗಡ (ಅಧ್ಯಕ್ಷ), ಯಂಕೋಬ ಯದ್ದಲದಿನ್ನಿ, ಶಿವಪ್ಪ ಯಕ್ಲಾಸಪುರ (ಉಪಾಧ್ಯಕ್ಷರಾಗಿ), ಹುಲುಗಪ್ಪ ಹಸಮಕಲ್ (ಪ್ರಧಾನ ಕಾರ್ಯದರ್ಶಿ), ಹುಚ್ಚರೆಡ್ಡಿ ಮೆದಕಿನಾಳ (ಸಂಘಟನಾ ಕಾರ್ಯದರ್ಶಿ), ವಿನೋದ್ ಗೋನಾಳ (ಸಹ ಕಾರ್ಯದರ್ಶಿ), ರವಿ (ಖಜಾಂಚಿ), ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೀಲಕಂಠ ರಂಗಾಪೂರ, ಮೌನೇಶ ಬೆಂಚಮರಡಿ, ರಾಜು ತೋರಣದಿನ್ನಿ, ನಾಗಲಿಂಗಪ್ಪ ಪಾಮನಕಲ್ಲೂರು, ಶಿವಪುತ್ರಪ್ಪ, ಬಸಲಿಂಗಪ್ಪ ಅವರನ್ನು ನೇಮಿಸಿ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜದ ಜನರ ಆಶೋತ್ತರಗಳಿಗೆ ಸ್ಪಂದಿಸುವಂತೆ ನೂತನ ಸಮಿತಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಹನುಮಂತಪ್ಪ ಗೋಮರ್ಸಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನರಸಪ್ಪ ಕಟ್ಟಿಮನಿ, ಬಸವರಾಜ ಇರಕಲ್, ಹುಚ್ಚರೆಡ್ಡಿ ಹಿರೇದಿನ್ನಿ, ವಿರುಪಣ್ಣ ಬೂದಿವಾಳ, ನಾಗರತ್ನ ಕಟ್ಟಿಮನಿ, ಅಮರೇಶ ಪಾಮನಕಲ್ಲೂರು ಸೇರಿದಂತೆ ಇನ್ನಿತರರಿದ್ದರು

