ಮಾನ್ವಿ: ಪಟ್ಟಣದಲ್ಲಿನ ವಿವಿಧ ಬಂಗಾರ ಹಾಗೂ ಬೆಳ್ಳಿಯ ಅಭರಣಗಳನ್ನು ತಯಾರಿಸುವವರ ಹಾಗೂ ಮಾರಾಟ ಮಳಿಗೆಗಳು,ಜ್ಯೂವೇಲ್ಲರಿ ಅಂಗಡಿಗಳಿಗೆ ಮಾನ್ವಿ ಪೊಲೀಸ್ ಠಾಣೆಯ ಎ.ಎಸ್.ಐ. ಶಿವಲಿಂಗಪ್ಪ ಭೇಟಿ ನೀಡಿ ಅಂಗಡಿ ಮಾಲಿಕರಿಗೆ ಸಾರ್ವಜನಿಕ ಸುರಕ್ಷತೆ ಅಧಿನಿಯಮ 2017 ಕಲಂ 6 (1) ಅಡಿಯಲ್ಲಿ ನೋಟಿಸ್ ನೀಡಿ ಮಾತನಾಡಿ ರಾಯಚೂರು ಜಿಲ್ಲಾ ಪೋಲಿಸ್ ಅಧೀಕ್ಷಕರು ಇತ್ತಿಚಿನ ದಿನಗಳಲ್ಲಿ ಜಿಲ್ಲೇಯಲ್ಲಿ ಅಭರಣ ಅಂಗಡಿಗಳಲ್ಲಿ ರಾಜಸ್ಥಾನ ಮತ್ತು ಉತ್ತರಪ್ರದೇಶದಿಂದ ಎರಡು ವಿಭಿನ್ನವಾದ ಕಳ್ಳರ ತಂಡಗಳು ಕಾರ್ಯಚಾರಿಸಿ ಅಭರಣ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಕುರಿತು ನೀಡಿದ ಸೂಚನೆ ನೀಡಿದ್ದು ಅದರಂತೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಂಗಾರದ ಅಭರಣಗಳ ಮಾರಾಟಗಾರರು ತಮ್ಮಲಿರುವ ಕೋಟ್ಯಾಂತರ ಬೆಲೆ ಬಾಳುವ ಬಂಗಾರ,ಬೆಳ್ಳಿ ಸೇರಿದಂತೆ ಅಮೂಲ್ಯವಾದ ಅಭರಣಗಳು ಕಳ್ಳತನವಾಗದಂತೆ ಅಗತ್ಯ ಜಾಗ್ರತೆ ವಹಿಸಬೇಕು ಅಂಗಡಿಗಳಲ್ಲಿ ಅಗತ್ಯವಾದ ಭದ್ರತ ವ್ಯವಸ್ಥೆ ಮಾಡಿಕೊಳ್ಳಬೇಕು ಬಂಗಾರ ಅಂಗಡಿಯ ಒಳಗಡೆ ಮತ್ತು ಹೊರಗಡೆ ಭದ್ರತೆಗಾಗಿ ಸಿ.ಸಿ. ಟಿವಿ .ಕ್ಯಾಮೆರಾಗಳನ್ನು ಆಳವಡಿಸಿಕೊಳ್ಳಬೇಕು, ಅಂಗಡಿಯ ಬಾಗಿಲುಗಳನ್ನು ಕಬ್ಬಿಣದಿಂದ ಗಟ್ಟಿ ಮುಟ್ಟಾಗಿ ಇರುವಂತೆ ಮಾಡಿಸಬೇಕು ಅಂಗಡಿಯನ್ನು ಬಂದ್ ಮಾಡಿಕೊಂಡು ಹೋಗುವಾಗ ಭಾರಿ ಬೆಲೆಬಾಳುವ ಆಭರಣಗಳನ್ನು ಅಂಗಡಿಗಳಲ್ಲಿ ಬಿಡದೆ ಅವುಗಳನ್ನು ತಮ್ಮ ಮನೆಗಳಿಗೆೆ ತೆಗೆದುಕೊಂಡು ಹೋಗಬೇಕು, ತಮ್ಮ ಅಂಗಡಿಗಳ ಹೊರಗಡೆ ಹಾಗೂ ಒಳಗಡೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಕುರಿತು ಕೂಡಲೇ ಪೊಲೀಸ್ ಠಾಣೆಗೆ ಅಥಾವ ಪೊಲೀಸ್ ಸಹಾಯವಾಣಿ ವಾಹನ ಸಂಖ್ಯೆ 112 ಕ್ಕೆ ಕರೆಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಬಂಗಾರದ ಅಭರಣ ಮಳಿಗೆಗಳಿಗೆ ಭೇಟಿ ನೀಡಿ ಸುರಕ್ಷೇತೆಗಾಗಿ ನೋಟೀಸ್ ನೀಡಿ ಜಾಗೃತಿ ಮೂಡಿಸಿದರು.
ಪೊಲೀಸ್ ಸಿಬ್ಬಂದಿಗಳಾದ ಬಸವರಾಜ,ಚರಣರಾಜ, ರವಿಗೌಡ ಸೇರಿದಂತೆ ಇನ್ನಿತರರು ಇದ್ದರು.
30-ಮಾನ್ವಿ-3:
ಮಾನ್ವಿ: ಪಟ್ಟಣದಲ್ಲಿನ ವಿವಿಧ ಬಂಗಾರ ಹಾಗೂ ಬೆಳ್ಳಿಯ ಅಭರಣಗಳನ್ನು ತಯಾರಿಸುವವರಿಗೆ ಪೊಲೀಸ್ ಅಧಿಕಾರಿಗಳು ನೋಟೀಸ್ ನೀಡಿ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *