ಸಿರವಾರ.ಫೆ.28
2026 ನೇ ಸಾಲಿನ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಯು ಇಂದಿನಿಂದ (ಶನಿವಾರ) ಪ್ರಾರಂಭವಾಗಿದ್ದು, ಮೊದಲ ದಿನ ಕನ್ನಡ ವಿಷಯ ಪರೀಕ್ಷೆಗೆ ಒಟ್ಟು ಎರಡು ಕೇಂದ್ರ ಸೇರಿ ಒಟ್ಟು 625 ವಿದ್ಯಾರ್ಥಿಗಳು ನೊಂದಣಿ ಮಾಡಿಸಿದರೆ, 28 ವಿದ್ಯಾರ್ಥಿಗಳು ಗೈರು,597 ಹಾಜರಿಯಾಗಿ ಪರೀಕ್ಷೆ ಬರೆದರು.
ಮೊದಲ ದಿನ ಶಾಂತಿಯುತವಾಗಿ ಪರೀಕ್ಷೆ ಜರುಗಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ಸಿರವಾರ ಕೇಂದ್ರದಲ್ಲಿ ಒಟ್ಟು ವಿದ್ಯಾರ್ಥಿಗಳು 311. ಹಾಜರಾದ ವಿದ್ಯಾರ್ಥಿಗಳು 285, ಗೈರು ಹಾಜರಾದ ವಿದ್ಯಾರ್ಥಿಗಳು 26, ಎಂದು ಪರೀಕ್ಷೆಯ ಮುಖ್ಯಾಧಿಕ್ಷಕ ಹನುಮಂತ ಚನ್ನರು ತಿಳಿಸಿದರು.ಕೇಂದ್ರ ಸಂಖ್ಯೆ 02 ಅಮರೇಗೌಡ ಪಾಟೀಲ್ ಬಯ್ಯಾಪುರ ಪದವಿ ಪೂರ್ವ ಕಾಲೇಜ್ ಒಟ್ಟು ವಿದ್ಯಾರ್ಥಿಗಳು 314 ಹಾಜರಾದ ವಿದ್ಯಾರ್ಥಿಗಳು 312 , ಗೈರು ಹಾಜರಾದ ವಿದ್ಯಾರ್ಥಿಗಳು 02 ಎಂದು ತಿಳಿಸಿದರು.

