ಮಸ್ಕಿ: ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗಾನೂರು ವ್ಯಾಪ್ತಿಯ ಉದ್ಬಾಳ ಗ್ರಾಮದಲ್ಲಿ ಪಿಪಿಎಚ್‌ಎಫ್, ಪ್ರಣಾ ಯೋಜನೆ ,ಜಿಇ ಹೆಲ್ತ್ಕೇರ್ ಸಂಯುಕ್ತಾಶ್ರಯದಲ್ಲಿ ಜಂಟಿಯಾಗಿ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಬಾಳ ಗ್ರಾ.ಪಂ ಅಧ್ಯಕ್ಷರು ನೀಲಕಂಠಪ್ಪ ಉದ್ಘಾಟಿಸಿದರು.
ನಂತರ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಗನೂರು ವೈದ್ಯಕೀಯ ಅಧಿಕಾರಿ ಡಾ.ದೌವಲಸಾಬ್ ಮಾತನಾಡಿ ಪ್ರತಿಯೊಂದ ಮನೆಯಲ್ಲಿ ಬಿಪಿ ಶುಗರ್ ಕಾಯಿಲೆವಿರುವ ಜನವರುವ ಈ ದಿನದಲ್ಲಿ ಅಸಾಂಕ್ರಿಮಿಕ ಕಾಯಿಲೆಗಳು ಬರುವ ಮುನ್ನ ನಿಯಮಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳು ಒಂದೇ ಸೂರಿನಡಿ ಗ್ರಾಮದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡಿಸುವ ಉದ್ದೇಶದಿಂದ ಗರ್ಭಗಂಠ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಅಧಿಕ ರಕ್ತದ ಒತ್ತಡ ಎತ್ತರ ತೂಕ ಹಾಗೂ ಬಿಪಿ ಶುಗರ್ ತಪಾಸಣೆ, ಕಣ್ಣು ತಪಾಸಣೆ, ಬಾಯಿ ಮತ್ತು ಹಲ್ಲು ತಪಾಸಣೆ, ಆರ್‌ಎಫ್‌ಟಿ ಎಲ್‌ಎಫ್‌ಟಿ ಪರೀಕ್ಷೆ ಮತ್ತು ಪೌಷ್ಟಿಕ ಆಹಾರ ಸೇವನೆ ಕುರಿತು ಗ್ರಾಮೀಣ ಜನರಿಗೆ ಆರ್ಥಿಕ ವೆಚ್ಚ ತಗ್ಗಿಸುವ ಸಲುವಾಗಿ ಉಚಿತವಾಗಿ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಆಪ್ತ ಸಮಾಲೋಚನೆಯನ್ನ ಪೀಪಲ್ ಟು ಪೀಪಲ್ ಹೆಲ್ತ್ ಫೌಂಡೇಶನ್ ಜಿ ಇ ಹೆಲ್ತ್ ಕೇರ್ ಸಂಸ್ಥೆಯವರು ತಜ್ಞರಿಂದ ಮಹಿಳೆಯರಿಗೆ ತಪಾಸಣೆಯನ್ನ ಉಚಿತವಾಗಿ ಮಾಡಿಸುತ್ತಿದ್ದಾರೆ ಎಂದರು.
ನAತರ ಉದ್ಬಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಸವರಾಜ್ ಇವರು ಮಾತನಾಡಿ ಪೀಪಲ್ ಟು ಪೀಪಲ್ ಸಂಸ್ಥೆಯವರು ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲು ಬಂದಿದ್ದಾರೆ. ಗ್ರಾಮಸ್ಥರು ಈ ಕಾರ್ಯಕ್ರಮವನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ದಂತವೈದ್ಯರು ಡಾ.ದೇವರಾಜ ಅವರು ಮಾತನಾಡಿ ಸ್ತಿçÃರೋಗ ತಜ್ಞರನ್ನ ಮತ್ತು ಹಲ್ಲು ಕಣ್ಣು ತಜ್ಞರನ್ನ ಗ್ರಾಮಕ್ಕೆ ಕರೇದು ಮಹಿಳೆಯರಿಗೆ ಉಚಿತವಾಗಿ ತಪಾಸಣೆ ಮಾಡಿಸೋದು ಶ್ಲಾಘನೀಯವಾದದ್ದು ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದ ಪೀಪಲ್ ಟು ಪೀಪಲ್ ಸಂಸ್ಥೆಯ ಪ್ರೋಗ್ರಾಮ್ ಮ್ಯಾನೇಜರ್ ಮಲೈಕಾ ಅಮೀನ ಇವರು ಕಳೇದ ಒಂದು ವರ್ಷದಿಂದ ನಮ್ಮ ಸಂಸ್ಥೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಕಾರದಿಂದ ವೈಧ್ಯರು ಮತ್ತು ಸಿಬ್ಬಂಧಿಗಳು ಆಶಾ ಕಾರ್ಯಕರ್ತರ ಗ್ರಾಮಸ್ಥರ ಬೆಂಬಲದೊAದಿಗೆ ಮಹಿಳಾ ಕ್ಷೇಮಾ ತಪಾಸಣೆ ಶಿಬಿರ ಕೈಗೊಳ್ಳುತ್ತಾ ಬಂದಿದ್ದೇವೆ. ಉಚಿತವಾಗಿ ಈ ಶಿಬಿರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಎಲ್ಲಾ ಪರೀಕ್ಷೆಗಳು ಉಚಿತವಾಗಿ ನೀಡಲು ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆ, ಬಿಪಿ, ಸಕ್ಕರೆ ತಪಾಸಣೆ, ಕಣ್ಣು ತಪಾಸಣೆ, ಎಚ್‌ಬಿ ಪರೀಕ್ಷೆ, ಎಲ್‌ಎಫ್‌ಟಿ/ಆರ್‌ಎಫ್‌ಟಿ, ಎಚ್‌ಬಿಎ೧ಸಿ ತಪಾಸಣೆ,ಉಚಿತ ಅಭಾ ಕಾರ್ಡ್ ನೋಂದಣಿ ಮಾಡುತ್ತಿದ್ದೇವೆ ದಯವಿಟ್ಟು ಸದುಪಾಯೋಗ ಪಡೆದುಕೊಳ್ಳಲು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಉದ್ಬಾಳ ಗ್ರಾಮ ಪಂಚಾಯಿತಿ ಅದ್ಯಕ್ಷರು ನೀಲಕಂಠಪ್ಪ ಪಿಡಿಓ ಬಸವರಾಜ ಡಾ.ದೌವಲಸಾಬ್ ಡಾ.ಸುನೀಲ್, ಮಹಿಳಾ ವೈದ್ಯೆ ಡಾ.ಸೌಮ್ಯ ದಂತವೈಧ್ಯರು ಡಾ.ನಾಗವೇಣಿ,ಡಾ.ದೇವರಾಜ ಮಸ್ಕಿ ತಾ.ಪಂಐಇಸಿ ಸತೀಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳು ಹಾಗೂ ಪಿಪಿಹೆಚ್‌ಎಫ್ ಸಿಬ್ಬಂಧಿ ವರ್ಗ ಗ್ರಾಮಸ್ಥರು ಸ್ವಯಂ ಸೇವಕರು ಇದ್ದರು.
ಈ ಸಂದರ್ಭದಲ್ಲಿ ಮಲೈಕಾ ಅಮೀನ,ಉದ್ಬಾಳ ಗ್ರಾಮ ಪಂಚಾಯಿತಿ ಅದ್ಯಕ್ಷರು ನೀಲಕಂಠಪ್ಪ ಪಿಡಿಓ ಬಸವರಾಜ ಡಾ.ದೌವಲಸಾಬ್ ಡಾ.ಸುನೀಲ್, ಮಹಿಳಾ ವೈದ್ಯೆ ಡಾ.ಸೌಮ್ಯ ದಂತವೈಧ್ಯರು ಡಾ.ನಾಗವೇಣಿ,ಡಾ.ದೇವರಾಜ ಮಸ್ಕಿ ತಾ.ಪಂಐಇಸಿ ಸತೀಶ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿಗಳು ಹಾಗೂ ಪಿಪಿಹೆಚ್‌ಎಫ್ ಸಿಬ್ಬಂಧಿ ವರ್ಗ ಗ್ರಾಮಸ್ಥರು ಸ್ವಯಂ ಸೇವಕರು ಇದ್ದರು.

