ಮಾನ್ವಿ: ಬಲ್ಲಟಗಿಯಲ್ಲಿ ನಡೆದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸ.ಹಿ.ಪ್ರಾ.ಶಾಲೆಯ ಮುಸ್ಟೂರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸಾಧನೆಗಳ ಸುರಿಮಳೆ ಬರೆಸಿದ್ದಾರೆ. ಸಂಗೀತ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆಮ ಜೊತೆಗೆ ಕಿರಿಯ ವಿಭಾಗದಲ್ಲಿ ಲೇಖನ ಅಭಿನಯ ಗೀತೆಯಲ್ಲಿ ಪ್ರಥಮ, ಧಾರ್ಮಿಕ ಪಠಣ(ಅರೇಬಿಕ್) ತೃತೀಯ, ಕೀರ್ತಿ ಇಂಗ್ಲಿಷ್ ಕಂಠಪಾಠ ದ್ವಿತೀಯ ಮತ್ತು ಕಥೆ ಹೇಳುವುದರಲ್ಲಿ ದ್ವಿತೀಯ, ಹಿರಿಯ ವಿಭಾಗದಲ್ಲಿ ಅಶ್ವಿನಿ ದೇಶಭಕ್ತಿ ಗೀತೆಯಲ್ಲಿ ದ್ವಿತೀಯ ಹಾಗೂ ಅಭಿನಯ ಗೀತೆಯಲ್ಲಿ ತೃತೀಯ, ಅಂಜಲಿ ಕಥೆ ಹೇಳುವುದರಲ್ಲಿ ತೃತೀಯ, ಪ್ರೌಢ ವಿಭಾಗದಲ್ಲಿ ಗೀತಾ ಕವನ ವಾಚನ ತೃತೀಯ, ಸ್ವಾತಿ ಭಾವಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು ಶಾಲೆಗೆ ಊರಿಗೆ ಕೀರ್ತಿ ತಂದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕ ವೃಂಧ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಗ್ರಾಮಸ್ಥರು ಸಂಘ ಸಂಸ್ಥೆಗಳು ಅಭಿನಂಧಿಸಿದ್ದಾರೆ.

