ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಉದ್ಯೋಗ ಖಾತ್ರಿ ನೌಕರರಿಗಿಂತ ಕಡಿಮೆಯಲ್ಲಿ ಗೌರವಧನವನ್ನುb ನೀಡುತ್ತಿದ್ದು ಪದವಿ ಕಾಲೇಜಿನ ಅತಿಥಿ‌ ಉಪನ್ಯಾಸಕರ ಮಾದರಿಯಲ್ಲಿ ವೇತನವನ್ನು ನೀಡಬೇಕು , ವಾರಕ್ಕೆ 10/12 ಗಂಟೆ ಭೋದನಾ ಅವಧಿ ನಿಗದಿ ಮಾಡಲಾಗಿದೆ. ಆದರೆ ವಾಸ್ತವವಾಗಿ ಕಾಯಂ ಉಪನ್ಯಾಸಕರಷ್ಟೇ ಕೆಲಸ ಮಾಡಲಾಗುತ್ತಿದೆ. ಆದಾಗ್ಯೂ ಸಮರ್ಪಕ ವೇತನ, ಉದ್ಯೋಗ ಭದ್ರತೆ, ವೈದ್ಯಕೀಯ ಸೌಲಭ್ಯ, ತುಟ್ಟಿಭತ್ಯೆ, ರಜೆ ಸೌಲಭ್ಯ ಸೇರಿದಂತೆ ಯಾವುದೇ ಅನುಕೂಲಗಳಿಲ್ಲ.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರಾದ ನಾವೆಲ್ಲರೂ ವಿದ್ಯಾರ್ಥಿಗಳ ದಾಖಲಾತಿ ಸೇರಿದಂತೆ ಕಾಲೇಜಿನ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಸಂಸ್ಥೆಯ ಹಿತದೃಷ್ಟಿಯಿಂದ ಉತ್ತಮ ಫಲಿತಾಂಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ. ಆದ್ದರಿಂದ ಈ ಮೇಲ್ಕಂಡ ಎಲ್ಲಾ ಬೇಡಿಕೆಗಳನ್ನು ತಾವು ಪರಿಶೀಲಿಸಿ, ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರಕಾರದ ಹಾಗೂ ಸಂಬಂಧಪಟ್ಟ ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಮಾನ್ಯ ಸಚಿವರ ಗಮನವನ್ನು ಸೆಳೆದು ವೇತನ ಪರಿಷ್ಕರಣೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಕೋರಿದರು‌.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವುಕುಮಾರ್ , ವಿಜಯಕುಮಾರ್, ಬಸವರಾಜ್ , ನಾಗರಾಜ, ಬಸವರಾಜ್ , ವಿನೋದಕುಮಾರ , ಕೃಷ್ಣಪ್ಪ , ತಿಮ್ಮಪ್ಪ ಸೇರಿದಂತೆ ಇನ್ನಿತರ ಉಪನ್ಯಾಸಕರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *