ಸಿಂಧನೂರು – ತೋರಣಗಲ್ ಜಿಂದಾಲಿನ ವೈಷ್ಣವಿ ಅರುಣ್ ಕುಮಾರ್ ಚಿತ್ರಾಲ್ ಈ ಆದರ್ಶ ದಂಪತಿಗಳ ಮಗನಾದ ಹಾರ್ಧಿಕ್ ಅವರ ಜನ್ಮ ಸಾರ್ಥಕ ದಿನ ಹಾಗೂ ದಿ. ಶಿವಗಂಗಮ್ಮ ಕಂಪ್ಲಿ ಇವರುಗಳ 8ನೇ ವರ್ಷದ ಪುಣ್ಯರಾಧನ ಕಾರ್ಯಕ್ರಮವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮಗಳು ನೆರವೇರಿವು. ಈ ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಪ್ರತಿ ವರ್ಷವೂ ಕೂಡ ಜಿಂದಾಲಿನ ಚಿತ್ರಾಲ್ ಕುಟುಂಬ ಹಾಗೂ ಕಂಪ್ಲಿಯ ದಿ.ಶಿವಲಿಂಗಮ್ಮ ಅವರ ಕುಟುಂಬದಿಂದ ಆಶ್ರಮದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರುತ್ತಿರುವುದು. ಆಶ್ರಯದಾತರುಗಳಿಗೆ ಹಬ್ಬದ ವಾತಾವರಣ ಉಂಟಾಗಿರುತ್ತದೆ. ದಾನಿಗಳು ಕಾರುಣ್ಯಾಶ್ರಮದಲ್ಲಿನ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಅರ್ಥ ಕಲ್ಪಿಸಿ ಕೊಟ್ಟಿದ್ದಾರೆ. ಇವರುಗಳು ಅನಾಥರ ನೋಂದವರ ಪಾಲಿಗೆ ಮಹಾದಾಸೋಹಿಗಳಾಗಿ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ. ಇಂತಹ ಪುಣ್ಯಾತ್ಮರ ಸಹಾಯ ಸಹಕಾರದಿಂದಾಗಿ ಕಾರುಣ್ಯ ಕುಟುಂಬದ ನಿರ್ವಹಣೆ ಮಾಡುತ್ತಿದ್ದೇವೆ. ಇಂದಿನ ಈ ಕಾರ್ಯಕ್ರಮದಲ್ಲಿ ಆಶ್ರಮದಲ್ಲಿನ ಆಶ್ರಯದಾತರುಗಳು ನಮ್ಮ ಹಾರ್ದಿಕ್ ಚಿತ್ರಾಲ್ ಅವರಿಗೆ ಜನ್ಮದಿನದ ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಹಾರೈಸಿದ್ದಾರೆ. ಮತ್ತು ದಿ.ಶಿವಗಂಗಮ್ಮ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇಂತಹ ವಿಶೇಷ ಕಾರ್ಯಕ್ರಮಗಳನ್ನು ದಾನಿಗಳು ಕಾರುಣ್ಯದಂತಹ ಕರುಣೆಯ ಕುಟುಂಬದಲ್ಲಿ ಆಚರಿಸಿ ಅಂಧ,-ಅನಾಥರ ಬಾಳಿಗೆ ಬೆಳಕಾಗಿ ಹಸಿವು ನೀಗಿಸುವ ಅನ್ನದಾತರಾಗಿರಿ ಎನ್ನುವುದು ಸಾರ್ವಜನಿಕರಲ್ಲಿ ವಿಶೇಷ ಕೋರಿಕೆಯಾಗಿದೆ. ಈ ಕುಟುಂಬಗಳಿಗೆ ಭಗವಂತನ ಆಶೀರ್ವಾದ ಸದಾವಕಾಲವಿರಲಿ ಎಂದು ನಾವೆಲ್ಲರೂ ಪ್ರಾರ್ಥಿಸಿ ಕೊಂಡು ಈ ಕುಟುಂಬಗಳಿಗೆ ಹಾರೈಸಿದ್ದೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಮಹಾಂತೇಶ ದೋಟಿಹಾಳ. ಬಸವ ಸ್ವಾಮಿ ಆಶ್ರಯದಾತರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *