ತಾಳಿಕೋಟಿ: ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನೂತನವಾಗಿ ಪದಗ್ರಹಣ ಮಾಡಿರುವ ಎಂ.ಎಸ್.ಬಡದಾನಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಆರ್.ಬಿ.ದಮ್ಮೂರಮಠ ಇವರನ್ನು ತಾಳಿಕೋಟಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನೂತನ ಬಿಇಓ ಬಡದಾನಿ ಅವರು ಕ್ಷೇತ್ರದಲ್ಲಿರುವ ಎಲ್ಲಾ ಶಾಲೆಗಳು ಇನ್ನೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವಂತಾಗಲು ನನಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ, ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು. ಈ ಸಮಯದಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಟಿ.ವಜ್ಜಲ್, ಉಪಾಧ್ಯಕ್ಷ ಟಿ.ಹೆಚ್.ಲಮಾಣಿ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ಬೀರಗೊಂಡ, ಪತ್ತು ಬೆಳೆಸುವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ವಾಲಿಕಾರ, ಪ್ರಾ. ಶಾ.ಶಿ.ಸಂಘದ ಉಪಾಧ್ಯಕ್ಷೆ(ಮಹಿಳಾ) ರೇಣುಕಾ ಬಸಪ್ಪ ಆಲೂರ, ಸಹ ಕಾರ್ಯದರ್ಶಿ(ಮಹಿಳಾ) ಸರಸ್ವತಿ ಬನ್ನೆಟ್ಟಿ, ಕೋಶಾಧ್ಯಕ್ಷ ಆರ್ ಎಸ್ ಹಿಪ್ಪರಗಿ, ಸಹ ಕಾರ್ಯದರ್ಶಿ ಅಲ್ತಾಫ್ ನಗಾರ್ಚಿ, ಸಹ ಕಾರ್ಯದರ್ಶಿ ಎನ್.ಕೆ.ಸಿಪಾಯಿ, ಸಂಘಟನಾ ಕಾರ್ಯದರ್ಶಿ (ಮಹಿಳಾ) ನೀಲಮ್ಮ ಮೈಲೇಶ್ವರ, ಶ್ರೀಶೈಲ ನಾಯ್ಕೋಡಿ, ಶಿಕ್ಷಕ ಆರ್ ಎಲ್ ಕುಲಕರ್ಣಿ ಮತ್ತಿತರರು ಇದ್ದರು.

