ಸಿಂಧನೂರು (ಆಗಸ್ಟ್ 24): ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಜ್ ರಾಯಚೂರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮಲಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ಆಗಸ್ಟ್ – 24 , “ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿವಹಿಸಿ” ವಿರುಪಪುರ್ ಆಯುಷ್ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ವಿರುಪಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿರೂಪಾಪುರ್ ಸಾಂಕ್ರಾಮಿಕ ರೋಗಗಳ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀಮತಿ ಗೀತಾ ಹಿರೇಮಠ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಿಂಧನೂರು ಇವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ವಾತಾವರಣದಲ್ಲಿ ಬದಲಾವಣೆಯಾದ ಕಾರಣ ಜ್ವರ, ಶೀತ ಕೆಮ್ಮು ಸಾಮಾನ್ಯವಾಗಿ ಕಂಡುಬರುತ್ತವೆ ಹಾಗಾಗಿ ನಿಯಮಿತವಾಗಿ ರಕ್ತದ ಪರೀಕ್ಷೆ ಮಾಡಿಸಬೇಕು, ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ತಿಸಲಾಯಿತು ಕ್ಷಯರೋಗದ ಲಕ್ಷಣಗಳ, ಕುಷ್ಟರೋಗದ, ತಂಬಾಕು ಸೇವನೆ ಅಥವಾ ಮಾದಕ ವಸ್ತುಗಳಂತ ದುಶ್ಚಟಗಳಿಂದ ದೂರವಿರಬೇಕು, ಆನೆ ಕಾಲು ರೋಗದ ನಿರ್ವಹಣೆ, ರಕ್ತಹಿನತೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು ತದನಂತರ ವಿರೂಪಾಪುರ್ ಗ್ರಾಮದಲ್ಲಿ ಗಂಡಾಂತರ ಗರ್ಭಿಣಿಯರ ಮನೆ ಬೇಟೆ ಮಾಡಿ ವಾತಾವರಣದಲ್ಲಿ ಬದಲಾವಣೆಯಾದ ಕಾರಣ ಸಾಂಕ್ರಾಮಿಕ ರೋಗಗಳ ಹಾಗರ ಹೆಚ್ಚಾದಂತೆ ಸಾರ್ವಜನಿಕರಲ್ಲಿ ಸಾಮಾನ್ಯವಾಗಿ ಜ್ವರ ನೆಗಡಿ ಕೆಮ್ಮು ಬೇರೆ ಬೇರೆ ಕಾಯಿಲೆ ಬರುವ ಸಂಭವ ಹೆಚ್ಚಾಗಿರುವುದರಿಂದ ಮುನ್ನಚ್ಚರಿಕೆ ಕ್ರಮಗಳನ್ನ ವಹಿಸಬೇಕು ಮಳೆ ಪ್ರಾರಂಭವಾದ ಹಿನ್ನೆಲೆ ಬಿಸಿಯಾದ ಆಹಾರ ಸೇವನೆ ಕಾಯಿಸಿ ಆರಿಸಿ ಸೋಸಿ ನೀರನ್ನು ಸೇವಿಸುವುದು . ಬೀದಿಬದೆಯ ಆಹಾರಗಳನ್ನು ಸೇವನೆ ಕಡಿಮೆ ಮಾಡಬೇಕು ಕತ್ತರಿಸಿ ಇಟ್ಟ ಹಣ್ಣುಗಳನ್ನು ಸೇವನೆ ಮಾಡುವುದು ಕಡಿಮೆ ಮಾಡಬೇಕು ವಯಕ್ತಿಕ ಸ್ವಚ್ಛತೆಯ ಗಮನವಹಿಸಬೇಕು,. ಗರ್ಭಿಣಿಯರಲ್ಲಿ ಜ್ವರದ ಲಕ್ಷಣಗಳು ಕಂಡಾಗ ಅಥವಾ ಯಾವುದೇ ಜ್ವರ, ಡೆಂಗ್ಯೂ ಜ್ವರ ಬಂದಾಗ ತೀವ್ರತರ ಜ್ವರ ಮೈ ಕೈ ನೋವು ಹಾಗೂ ಸುಸ್ತು ಕಾಣಿಸಿಕೊಳ್ಳುತ್ತದೆ ಇದು ತಾಯಿ ಹಾಗೂ ಮಗುವಿನ ಮೇಲೆ ಪರಿಣಾಮ ಬೀರಬಹುದು ತಕ್ಷಣ ವೈದ್ಯರ ಬಳಿ ರಕ್ತ ಪರೀಕ್ಷೆ ಮಾಡಿಸಬೇಕು ಪ್ಯಾರಾಸಿಟಮಾಲ್ ಹೊರತುಪಡಿಸಿ ಇತರೆ ನೋವು ನಿವಾರಕಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಬಾರದು ತೀವ್ರವಾದ ಜ್ವರ ತಲೆನೋವು ಹಾಗೂ ಕಣ್ಣುಗಳ ಹಿಂದೆ ನೋವು ವಿಪರೀತ ಕೀಲು ಮತ್ತು ಸ್ನಾಯುಗಳ ನೋವು ಚರ್ಮದ ಮೇಲೆ ಗುಳ್ಳೆಗಳು ಅಥವಾ ದಡಾರ, ಹೊಟ್ಟೆ ನೋವು, ವಾಂತಿ ಅಥವಾ ಸುಸ್ತು ವಸಡುಗಳಿಂದ ರಕ್ತಸ್ರಾವ ವೈದ್ಯರ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ರಕ್ತದೋತ್ತಡದ ನಿರಂತರ ತಪಾಸಣೆ, ಜ್ವರಕ್ಕೆ ಕೇವಲ ಪ್ಯಾರಸೀಟಮಾಲಾ ಬಳಸುವುದು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಸೊಳ್ಳೆ ನಿವಾರಕ ಕ್ರಿಮ್
ಗಳ್ಳನ್ನು ಬಳಸುವುದು, ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವುದು, ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ರಾತ್ರಿ ಮಲಗುವಾಗ ಸೊಳ್ಳೆಳೆ(ಸೊಳ್ಳೆ ಪರದೆ ) ಹಾಕುವುದು, ಕುದಿಸಿ ಆರಿಸಿದ ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಇಸ್ಮಾಯಿಲ್ ಬಿ PHCO, ಶ್ರೀದೇವಿ CHO, ಶಾಲೆಯ ಮುಖ್ಯ ಗುರುಗಳಾದ ರಮಾ ದೇವಿ , ಸಹ ಶೀಕ್ಷಕರುಗಳಾದ ಸುನಿತಾ , ಪ್ರತಿಮಾ, ತಸ್ಲೀಮ್, ನಾಗರಾಜ್, ಮರಿಯಪ್ಪ, ಭೀಮಮ್ಮ ಆಶಾ ಕಾರ್ಯಕರ್ತೆ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

