ನಗರ ಪ್ರದೇಶಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಒದಗಿಸಲಾಗುವ ಮೂಲಭೂತ ಆರೋಗ್ಯ ಸೇವೆಗಳನ್ನು ಬಡಾವಣೆಯ ಹಂತದಲ್ಲಿಯೇ ಸುಸಜ್ಜಿತ, “ನಮ್ಮ ಕ್ಲಿನಿಕ್‌” ಮೂಲಕ ಒದಗಿಸಲಾಗಿದ್ದು ಹಣ ಹಾಗೂ ಸಮಯದ ಉಳಿತಾಯದೊಂದಿಗೆ ಗುಣಮಟ್ಟದ ಆರೈಕೆಯನ್ನು ನಮ್ಮ ಕ್ಲಿನಿಕ್‌ ನಲ್ಲಿ ಪಡೆಯಿರಿ ಎಂದು ಯರಮರಸ್‌ ನಮ್ಮ ಕ್ಲಿನಿಕ್‌ ವೈದ್ಯರಾದ ಡಾ ಸಫೀಯಾ ಕಮಾಲ್‌ ತಾಯಂದಿರಿಗೆ ‌ವಿನಂತಿಸಿದರು.

ರಾಯಚೂರು ನಗರಕ್ಕೆ ಹೊಂದಿಕೊಂಡಿರುವ ಯರಮರಸ್‌ ನ ನಮ್ಮ ಕ್ಲಿನಿಕ್‌ ನಲ್ಲಿ ಚಿಕಿತ್ಸೆಗೆ ಆಗಮಿಸಿದ ತಾಯಂದಿರೊಂದಿಗೆ ಮಾತನಾಡುತ್ತಾ, ಆರೋಗ್ಯದ ಮೂಲಭೂತ ಸೇವೆಗಳಾದ, ಗರ್ಭಿಣಿಯರ ಆರೈಕೆ, ನವಜಾತ ಶಿಶುಗಳ ಆರೈಕೆ, ಮಕ್ಕಳ ಆರೋಗ್ಯ, ಸಾರ್ವತ್ರಿಕ ಲಸಿಕಾಕರಣ, ಕುಟುಂಬ ಕಲ್ಯಾಣ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ಮಾನಸಿಕ ಆರೋಗ್ಯ, ಹಿರಿಯರ ಆರೈಕೆ ಮತ್ತು ತುರ್ತು ಚಿಕಿತ್ಸೆಗಳಿಗೆ ಸೇವೆಗಳನ್ನು ಒದಗಿಸಿ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಮತ್ತು ಎಲ್ಲಾ ವಯಸ್ಸಿನ ಜನರ ಆರೋಗ್ಯವನ್ನು ಸುಧಾರಿಸಲು ಸರಕಾರ ಕೈಗೊಂಡಿರುವ ಮಹತ್ವಪೂರ್ಣ ಯೋಜನೆಯ ಸದುಪಯೋಗ ಪಡೆಯಿರಿ ಎಂದು ವಿನಂತಿಸಿದರಲ್ಲದೆ ಬರುವ ಡಿಸೆಂಬರ್ 21 ರಂದು ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ ದಾಸಪ್ಪನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ, ಪ್ರಾಥಮಿಕ ಅರೋಗ್ಯ ಸಂರಕ್ಷಣಾಧಿಕಾರಿ ಯಶೋಧಾ, ಪ್ರಯೋಗಾಲಯ ತಂತ್ರಜ್ಞೆ, ಸರಿತಾ, ಆಶಾ ಕಾರ್ಯಕರ್ತೆ ರಾಧಾ, ಸುಜಾತಾ ಹಾಗೂ ತಾಯಂದಿರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *