ಬದಲಾದ ಈಗಿನ ಪ್ರಸ್ತುತ ದಿನಗಳಲ್ಲಿ ಎಣ್ಣಿಯ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗಿದ್ದು, ಇದರ ಮಾಹಿತಿ ನೀಡಲು ಮತ್ತು ಎಣ್ಣಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ತಿಳಿಸುವ ಈ ಮಹತ್ವದ ಕಾರ್ಯಗಾರವು ಅರ್ಥಗರ್ಭಿತವಾಗಿದೆ ಎಂದು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್ ಹೇಳಿದರು.

ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಹಾಗೂ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ಸಹಯೋಗದಲ್ಲಿ ಎನ್ಎಮ್.ಇಒ ಎಸ್ ಯೋಜನೆ ಅಡಿಯಲ್ಲಿ ರೈತರಿಗೆ ಜಿಲ್ಲಾ ಮಟ್ಟದ ಕಾರ್ಯಾಗಾರ ಅಧ್ಯಕ್ಷತೆಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಪ್ರಕಾಶ ಚವ್ಹಾಣ್ ವಹಿಸಿಕೊಂಡು ಮಾತನಾಡಿದರು.

ದೇಶದಲ್ಲಿ ಎಣ್ಣೆ ಉತ್ಪನ್ನ ಕಡಿಮೆಯಾಗಿದೆ ಕೊರತೆ ಸರಿದೂಗಿಸಲು ಅನೇಕ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದು ದೇಶಕ್ಕೆ ಆರ್ಥಿಕ ಹೊರೆ, ಇದನ್ನು ತಪ್ಪಿಸಲು ಎಣ್ಣೆ ಕಾಳುಗಳ ಬೆಳೆಗಳ ನಿರ್ವಹಣೆಯ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಮಹತ್ವದ್ದವಾಗಿದೆ ಎಂದರು.

ಆರೋಗ್ಯಯುತ ಮಣ್ಣಿನ ಮೌಲ್ಯ 0.7 ಇದಕ್ಕಿಂತ ಕಡಿಮೆ ಇರಬಾರದು ಅಥವಾ ಹೆಚ್ಚು ಆಗಬಾರದು. ಮನುಷ್ಯರಿಗೆ ಬಿ.ಪಿ, ಶುಗರ್, ಇದ್ದಂತೆ ಭೂಮಿ ಮಣ್ಣು ಆರೋಗ್ಯಕರವಾಗಿದ್ದಾಗ ಮಾತ್ರ ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯ. ಭೂಮಿಯ ಗುಣ ಧರ್ಮದ ಆಧಾರದಲ್ಲಿ ಬೆಳೆಯ ಇಳುವರಿ ಬರುತ್ತದೆ ಎಂದರು.

ಸಿಂಧನೂರು ಕೃಷಿಕ ಸಮಾಜದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ ಮಾತನಾಡಿ, ರೈತರು ಬರೀ ಭತ್ತವನ್ನೆ ಹೆಚ್ಚು ಬೆಳೆಯುತ್ತಿದ್ದಾರೆ. ಕಾರಣ ಕೂಲಿ ಕಾರ್ಮಿಕರ ಸಮಸ್ಯೆ ಬೇರೆ ತಳಿ ಬೆಳೆಗಳನ್ನು ಬೆಳೆದರೆ ಹೆಚ್ಚು ಕೆಲಸವಿರುತ್ತದೆ. ಕೂಲಿ ಕಾರ್ಮಿಕರು ಸಿಗುವುದು ಈಗ ವಿರಳವಾಗಿದೆ. ರೈತರು ಭತ್ತ ಒಂದನ್ನೇ ನೆಚ್ಚಿಕೊಳ್ಳದೆ ಪರ್ಯಾಯ ಬೆಳೆಗಳನ್ನು ಬೆಳೆದು ಫಲವತ್ತಾದ ಈ ಭೂಮಿಯನ್ನ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಕ್ಕಾಗ ಮಾತ್ರ ರೈತ ಅಭಿವೃದ್ಧಿ ಹೊಂದಲು ಸಾದ್ಯ ಎಂದು ತಿಳಿಸಿದರು.

ಈ ವೇಳೆ: ಕೃಷಿ ಪರಿಕರ ಮಾರಾಟಗರಾರ ಸಂಘದ ಅಧ್ಯಕ್ಷ ಭೀಮನಗೌಡ ಗೋರೆಬಾಳ, ಜಿಲ್ಲಾ ಉಪ ಕೃಷಿ ನಿರ್ದೇಶಕ 1 ನಹೀಮ್ ಹುಸೇನ್, ಕೃಷಿ ನಿರ್ದೇಶಕ 2 ಮುತ್ತುರಾಜ್, ಕೃಷಿ ವಿಶ್ವವಿದ್ಯಾಲಯ ಉಪನ್ಯಾಸಕ ಡಾ.ಬಸವಣ್ಣೆಪ್ಪ, ಬೇಸಾಯ ಶಾಸ್ತ್ರಜ್ಞ ಡಾ.ಉಮೇಶ ಮಣ್ಣು ವಿಜ್ಞಾನಿ ಡಾ.ಶ್ರೀನಿವಾಸ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ರುದ್ರಗೌಡ, ಮಲ್ಲಿಕಾರ್ಜುನ ಧಡೇಸೂಗೂರು, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ರೈತರು ಭಾಗವಹಿಸಿ ಬೆಳೆಗಳ ಬಗ್ಗೆ ಮಾಹಿತಿ ಪಡೆದು, ಬೆಳೆಯುವ ಬೆಳೆಗಳ ಬಗ್ಗೆ ತಮಗಿದ್ದ ಆತಂಕ, ಅನುಮಾನಗಳ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿ ಮಾಹಿತಿಯನ್ನು ತಿಳಿದುಕೊಂಡರು.

Leave a Reply

Your email address will not be published. Required fields are marked *