ರಾಯಚೂರು: ಸುಪ್ರಸಿದ್ಧ ಸುಕ್ಷೇತ್ರ ಶಬರಮಲೈಗೆ ತೆರಳುವ ಅಯ್ಯಪ್ಪಸ್ವಾಮಿ ಭಕ್ತಾದಿಗಳು ದಕ್ಷಿಣ ಮಧ್ಯೆ ರೈಲ್ವೆ ಸಿಹಿ ಸುದ್ಧಿ ನೀಡಿದೆ ಎಂದು ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಡಾ. ಬಾಬುರಾವ್ ತಿಳಿಸಿದ್ದಾರೆ.
ಜನವರಿ ತಿಂಗಳಲ್ಲಿ ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆಯ ಜಾಸ್ತಿ ಇರುವ ಹಿನ್ನಲೆಯಲ್ಲಿ ರೈಲ್ವೆಯ ಸಂಚಾರದಟ್ಟಣೆ ನಿರ್ವಹಿಸುವ ಸಲುವಾಗಿ ದಕ್ಷಿಣ ಮಧ್ಯೆ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಚರ್ಲಪಲ್ಲಿಯಿಂದ ಜನವರಿ 10 ಹಾಗೂ 17 ನೇ ತಾರೀಖಿನಂದು ಹೊರಡುವ ರೈಲು ( ಸಂಖ್ಯೆ: 07127) ಸಿಕಂದರಬಾದ್, ಬೇಗಂ ಪೇಟೆ, ಲಿಂಗಂಪಲ್ಲಿ, ಶಂಕರಪಲ್ಲಿ, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ತಾಡಪತ್ರಿ, ಜೋಲಾರ ಪೇಟೆ, ಸೇಲಂ ಜಂಕ್ಷನ್, ಎರೋಡ ಜಂಕ್ಷನ್, ತಿರುಪುರ, ಪೊಡಾನೂರು, ಪಲಕ್ಕದ್, ತ್ರಿಸೂರ್, ಅಲುವಾ, ಎರ್ನಾಕುಲಂ ಪಟ್ಟಣ, ಕೊಟ್ಟಾಯಂ, ತಿರುಮಲ, ಚೆಂಗಾನೂರು ಮತ್ತು ಕಾಯನಕುಲಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅದೇರೀತಿಯಾಗಿ ಕೋಲಂ ನಿಂದ ಚಿರ್ಲಾಪಲ್ಲಿಗೆ ವಿಶೇಷ ರೈಲು (ಸಂಖ್ಯೆ 17128) ಜನವರಿ 12 ಹಾಗೂ 19 ರಂದು ಸಂಚರಿಸಲಿದೆ. ನಾಗರಿಕರು ವಿಶೇಷವಾಗಿ ಅಯ್ಯಪ್ಪ ಭಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

