ತಾಳಿಕೋಟಿ: ಪಟ್ಟಣದಲ್ಲಿ ತಾಲೂಕ ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 5 ರಂದು ಆಚರಿಸಲಿರುವ ಡಾ.ಬಾಬು ಜಗಜೀವನ ರಾಮ್ ಜಯಂತಿಯನ್ನು ಯಶಸ್ವಿಗೊಳಿಸುವ ಕುರಿತು ಸಮಾಜ ಬಾಂಧವರ ಪೂರ್ವಭಾವಿ ಸಭೆ ಗುರುವಾರ ಪ್ರವಾಸಿ ಮಂದಿರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆ ತಾಲೂಕ ಘಟಕದ ಅಧ್ಯಕ್ಷರಾದ ಗೋಪಾಲ ಕಟ್ಟಿಮನಿ ಹಾಗೂ ರಮೇಶ ವಾಯ್.ದೊಡಮನಿ (ಸಾಸನೂರ) ಅವರು ಮಾತನಾಡಿ ಏಪ್ರಿಲ್ 5ರಂದು ನಡೆಯಲಿರುವ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ರಾದ ಡಾ.ಬಾಬು ಜಗಜೀವನ್ ರಾಮ್ ಅವರ 119 ನೇ ಜಯಂತಿಯನ್ನು ತಾಲೂಕ ಆಡಳಿತ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಿದ್ದು ಇದರ ಅಂಗವಾಗಿ ಬೃಹತ್ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಜರುಗಲಿದೆ ಇದರ ಯಶಸ್ವಿಗೆ ನಮ್ಮ ಸಮಾಜದ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಸಹಕಾರ ನೀಡಬೇಕೆಂದು ಕೇಳಿಕೊಂಡರು. ಸದರಿ ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ಅಗತ್ಯವಾಗಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು. ಈ ಸಮಯದಲ್ಲಿ ಸಮಾಜದ ಪ್ರಮುಖರಾದ ಬಸ್ಸು ಮಾದರ, ರಮೇಶ ಸಿ.ಮಾದರ (ಹಡಗಿನಾಳ), ದ್ಯಾಮಣ್ಣ ಸೋಮನಾಳ (ಕೊಣ್ಣೂರ), ಮಲ್ಲಪ್ಪ ಶಿರೋಳ, ದುರ್ಗೇಶ ವಂದಗನೂರ (ಬಿ.ಸಾಲವಾಡಗಿ), ಶೇಖಪ್ಪ ಕಟ್ಟಿಮನಿ(ಕಾರಗನೂರ), ಶ್ರೀಕಾಂತ ಹಳ್ಳಿ (ಬಿ.ಸಾಲವಾಡಗಿ) ಮತ್ತಿತರರು ಇದ್ದರು.

