ಮಸ್ಕಿ: 2026-27ನೇ ಸಾಲಿನ ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರ, ಮಸ್ಕಿಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಡಿ ರೈತರಿಗೆ ಕಡಲೆ ಬಿತ್ತನೆ ಬೀಜ ವಿತರಿಸಲಾಯಿತು.
ಕೃಷಿ ಇಲಾಖೆಯ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಕಡಲೆ ಬೀಜವನ್ನು ವಿತರಿಸಲಾಗಿದ್ದು, ರೈತರು ಗುಣಮಟ್ಟದ ಬೀಜವನ್ನು ಬಳಸಿ ವೈಜ್ಞಾನಿಕ ಪದ್ಧತಿಯಲ್ಲಿ ಬಿತ್ತನೆ ಕೈಗೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ವೈ.ಬಿ. ಕ್ಷತ್ರಿ, ಸಿದ್ದರಾಮೇಶ, ಪ್ರಸಾದ್, ರಮೇಶ ಹಾಗೂ ರೈತ ಸಂಘದ ಮುಖಂಡರಾದ ವಿಜಯ ಬಡಿಗೇರ, ಅಲಮಪ್ಪ ಸೇರಿದಂತೆ ಇತರರು ಇದ್ದರು.

