ತಾಳಿಕೋಟಿ: ಪಟ್ಟಣದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ(ರಿ) ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ ಎರಡನೇ ವರ್ಷದ ಶ್ರೀರಾಮ ನವಮಿ ಉತ್ಸವ ಹಾಗೂ ಭವ್ಯ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ(ರಿ) ಅಧ್ಯಕ್ಷ ಅಮೀತಸಿಂಗ್ ಮನಗೂಳಿ, ಉಪಾಧ್ಯಕ್ಷ ಸೂರಜ ಹಜೇರಿ, ಸಮಿತಿಯ ಪದಾಧಿಕಾರಿಗಳಾದ ಗೋವಿಂದಸಿಂಗ್ ಹಜೇರಿ, ಸುಧೀರ ತಿವಾರಿ,ರಾಘು ಹಜೇರಿ, ವಿಠ್ಠಲಸಿಂಗ್ ಹಜೇರಿ, ನಿತಿನ್ ವಿಜಾಪುರ,ರಾಜು ಹಜೇರಿ, ಚಂದ್ರು ರಜಪೂತ ಹಾಗೂ ಸರ್ವ ಸಮಾಜದ ಗಣ್ಯರು ಹಾಗೂ ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

