ತಾಳಿಕೋಟಿ: ಪಟ್ಟಣದಲ್ಲಿ ಜರುಗಿದ ಶ್ರೀ ಬಂಡಿ ಬಸವೇಶ್ವರ ನೂತನ ರಥದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಮುಖ್ಯಸ್ಥರಾದ ವೇದ ಮೂರ್ತಿ ಮುರಗೇಶ ವಿರಕ್ತಮಠ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ಕಲ್ಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮ್ ಪ್ರಭು ಪಾಟೀಲ, ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ), ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸೌಕಾರ ಬಿರಾದಾರ, ಬಾಪುಗೌಡ ಸಂಗನಗೌಡ ಪಾಟೀಲ, ಶರಣಗೌಡ ಸಂ. ಪಾಟೀಲ, ಅಶೋಕಗೌಡ ಸಂ.ಪಾಟೀಲ,ರಾಜುಗೌಡ ಸಂ.ಪಾಟೀಲ ಮತ್ತಿತರರು ಇದ್ದರು.
