ನಗರದ ಗಂಗಾವತಿ ರಸ್ತೆಯಲ್ಲಿರುವ ತ್ರಿಭುವನ ಹೋಂಡಾ ಶೋರೂಮ್ ನಲ್ಲಿ ಮಾ.12ಗುರುವಾರ ಹೊಸ ಅಪ್ಡೇಟ್ ಬೈಕ್ ಹೋಂಡಾ ಶೈನ್-125 ಲಿಮಿಟೆಡ್ ಎಡಿಷನ್, ಹಾಗೂ ಡಿಯೋ-125 ಎಕ್ಷ್ ಎಡಿಷನ್ ಸ್ಕೂಟಿಯನ್ನ ಸಂಸ್ಥೆಯ ಮಾಲೀಕರಾದ ತಿಮ್ಮಣ್ಣ ಸಾಹುಕಾರ್ ಕುರುಕುಂದ, ಹೋಂಡಾದ ಜೋನಲ್ ಮೆನೇಜರ್ ಪ್ರವೀಣ್ ಶರ್ಮಾ, ಹಾಗೂ ಏರಿಯಾ ಸೇಲ್ಸ್ ಮೆನೇಜರ್ ಪ್ರಕಾರ್ ಮಿಶ್ರಾ, ತ್ರಿಭುವನ ಹೋಂಡಾ ಶೋರೂಮ್ ವ್ಯವಸ್ಥಾಪಕ ಅನಿಲಗೌಡ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಲಾಂಚ್ ಮಾಡಿದರು.
ವಿಭಿನ್ನ ವಿಶೇಷತೆಯುಳ್ಳ ಉತ್ತಮ ಗುಣಮಟ್ಟದ ಹೋಂಡಾ ಶೈನ್-125 ಬೈಕ್ ಇದು ರೈತರಿಗೆ ಹಾಗೂ ಯುವಕರಿಗೆ ತುಂಬಾ ಉಪಯುಕ್ತವಾದ ಬೈಕ್ ಆಗಿದೆ ಅಲ್ಲದೇ, 75 ಕಿ.ಮೀ.ಗಿಂತಲೂ ಅಧಿಕ ಮೈಲೇಜ್ ಕೊಡುವ ಹೋಂಡಾ ಶೈನ್-100 ಡಿಎಕ್ಸ್ ಬೈಕ್ ಆಗಿದೆ. ಹಾಗೂ ಡಿಯೋ-125 ಎಕ್ಸ್ ಎಡಿಷನ್ ಸ್ಕೂಟಿಯು ಕೂಡ ಉತ್ತಮ ಮೈಲೇಜ್ ಹೊಂದಿದೆ. ಇದು ಮಹಿಳೆಯರಿಗೆ, ಯುವತಿಯರಿಗೆ, ಹಾಗೂ ಕುಟುಂಬದ ಹಿರಿಯ ಸದಸ್ಯರಿಗೆ ಅತ್ಯಂತ ತುಂಬಾ ಉಪಯೋಗದ ಸ್ಕೂಟಿಯಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಂಧನೂರಿನ ತ್ರಿಭುವನ ಹೋಂಡಾ ಶೋರೂಮ್ ಗೆ ಭೇಟಿ ನೀಡಿ, ಬೈಕ್ ಮತ್ತು ಸ್ಕೂಟಿಯ ಸದುಪಯೋಗ ಪಡೆದುಕೊಳ್ಳಲು ಸಂಸ್ಥೆಯ ಮಾಲೀಕರಾದ ತಿಮ್ಮಣ್ಣ ಸಾಹುಕಾರ್ ಕುರುಕುಂದ ತಿಳಿಸಿದರು.
ಈ ಹೋಂಡಾ ಶೈನ್ ಅತಿ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ರೂ.8 ರಿಂದ 10 ಸಾವಿರವರೆಗೂ ಕ್ಯಾಸ್ ಡಿಸ್ಕೌಂಟ್ ಮತ್ತು ಆಕರ್ಷಕ ಉಡುಗೊರೆಗಳನ್ನು ಕೂಡ ಬೈಕ್ ಮತ್ತು ಸ್ಕೂಟಿಯನ್ನು ಕೊಂಡು-ಕೊಳ್ಳುವ ಗ್ರಾಹಕರಿಗೆ ಕೊಡಲಾಗುವುದು. ಕಳೆದ 9 ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ನಮ್ಮ ತ್ರಿಭುವನ ಹೋಂಡಾ ಶೋರೂಮ್ ನಲ್ಲಿ ಬೈಕ್ ಮತ್ತು ಸ್ಕೂಟಿಗಳ ಮಾರಾಟ ಹೆಚ್ಚಾಗಿದೆ. ಹಾಗೆ ಗ್ರಾಹಕರ ಸಂಖ್ಯೆಯು ಕೂಡ ಹೆಚ್ಚಾಗುತ್ತಲಿದೆ ಎಂದು ವ್ಯವಸ್ಥಾಪಕ ಅನಿಲಗೌಡ ತಿಳಿಸಿದರು.

