ತಾಳಿಕೋಟಿ: ನವದೆಹಲಿ ಎ.ಆರ್.ವಿಭಾಗದ ಸಾರ್ವಜನಿಕ ಕುಂದು ಕೊರತೆಗಳ ಅಧಿಕಾರಿ ಶಂಕರಲಾಲ ಹಾಗೂ ಜಲಶಕ್ತಿ ವಿಭಾಗದ ಶ್ರೀಧರ ಅವರು ಬುಧವಾರ ತಾಲೂಕಿನ ಕೊಣ್ಣೂರ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶಂಕರ ಲಾಲ್ ಹಾಗೂ ಶ್ರೀಧರ್ ಅವರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೂರೈಕೆಯಾಗುವ ಆಹಾರದ ವಸ್ತುಗಳು, ಮಕ್ಕಳಿಗೆ ಅಗತ್ಯವಾಗಿ ಸಿಗಬೇಕಾದ ಗುಣಮಟ್ಟದ ಶಿಕ್ಷಣ ಹಾಗೂ ಕೇಂದ್ರದ ಸ್ವಚ್ಛತೆ, ಶಿಸ್ತು ಮತ್ತು ಪರಿಸರದ ಕುರಿತು ಪರಿಶೀಲಿಸಿ ಸ್ಥಳದಲ್ಲಿದ್ದ ಇಲಾಖೆಯ ತಾಲೂಕಾಧಿಕಾರಿ ಶಿವಮೂರ್ತಿ ಕುಂಬಾರ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡು, ಅಂಗನವಾಡಿ ಕೇಂದ್ರದ ಉತ್ತಮ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವು ಅಗತ್ಯ ಸೂಚನೆಗಳನ್ನೂ ನೀಡಿದರು. ಈ ಸಮಯದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ,ಸಿಡಿಪಿಓ ಶಿವಮೂರ್ತಿ ಕುಂಬಾರ, ಅಂಗನವಾಡಿ ಕೇಂದ್ರ ಮೇಲ್ವಿಚಾರಕಿ ಸಾವಿತ್ರಿ ಮಂಕ್ಯಾಳ,ಶಿಲಾವತಿ, ಕಾರ್ಯಕರ್ತೆಯರಾದ ಕಾವ್ಯ ಅಂಗಡಗೇರಿ, ಶ್ರೀಮತಿ ಪಾಟೀಲ ಮತ್ತಿತರರು ಇದ್ದರು.

