ಜಾಜಿ ಶಿಣ ಸಂಸ್ಥೆಯ ಗುರುಕುಲ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಿಎ ಫೌಂಡೇಷನ್ ಪರೀೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಅರುಣಕುಮಾರ ಬಿ. 234, ಸೃಜನಾ ಎಸ್.ಕೆ. 222, ವಿಧಭ ಸಿ.221, ನವ್ಯ ಪಾಟೀಲ್ 217, ವಿನೋದ ಎನ್. 204 ಹಾಗೂ ವಿನಾಯಕ 200 ಅಂಕ ಗಳಿಸಿ ಪ್ರತಿಭೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ನಿರ್ದೇಶಕರಾದ ಪ್ರಾಂಶುಪಾಲ ರವಿಕುಮಾರ ವಲ್ಲಂಶೆಟ್ಟಿ, ಉಪ ಪ್ರಾಂಶುಪಾಲ ಮಂಗೇಶಕುಮಾರ ಖಡ್ಕೆ, ವಾಣಿಜ್ಯ ವಿಭಾಗದ ಮುಖ್ಯಸ್ಥ ಸಂಜೀವ ಪಾಟೀಲ್, ಸಿಎ ಫೌಂಡೇಷನ್ ಸಂಚಾಲಕ ಸಂತೋಷ ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ.

