ತಾಳಿಕೋಟಿ: ಶಾಸಕ ಅಪ್ಪಾಜಿ ನಾಡಗೌಡರು ನಮ್ಮ ಗ್ರಾಮಕ್ಕೆ ಸಾಕಷ್ಟು ಅನುದಾನವನ್ನು ಕೊಟ್ಟು ಕೆಲಸ ಮಾಡಿಸಿದ್ದಾರೆ, ಸದರಿ ರಸ್ತೆ ನಮ್ಮೆಲ್ಲರ ಬಹುದಿನಗಳ ಬೇಡಿಕೆಯಾಗಿತ್ತು ಇವತ್ತು ಅವರ ಪರವಾಗಿ ಭೂಮಿ ಪೂಜೆ ನೆರವೇರಿಸಿದ್ದೇನೆ ಕಾಮಗಾರಿ ಆದಷ್ಟು ಬೇಗ ಮುಗಿಯಲು ಎಲ್ಲರೂ ಸಹಕರಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸನಗೌಡ ಹಡಲಗೇರಿ ಹೇಳಿದರು. ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಪಂ ವಿಜಯಪುರ ಸನ್ 2025-26 ನೇ ಸಾಲಿನ ಲೆಕ್ಕ ಶಿರ್ಷಿಕೆ 5054ರಡಿ ರೂ. 100 ಲಕ್ಷ ಮೊತ್ತದ ಎಸ್.ಸಿ.ಕಾಲೋನಿಯ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಶಾಸಕ ನಾಡಗೌಡರು ಅಭಿವೃದ್ಧಿಪರ ಚಿಂತಕರಾಗಿದ್ದು ಅವರೆಂದೂ ಪ್ರಚಾರ ಬಯಸಿದವರಲ್ಲ, ಸರಳ ಸಜ್ಜನ ವ್ಯಕ್ತಿಗಳಾಗಿದ್ದು ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋಗುವರಾಗಿದ್ದಾರೆ. ನಮ್ಮ ಗ್ರಾಮದ ಕುರಿತು ವಿಶೇಷ ಆಸಕ್ತಿ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕೊಡುವವರಿದ್ದಾರೆ ಅವರಿಗೆ ನಾವೆಲ್ಲರೂ ಶಕ್ತಿ ತುಂಬವ ಕೆಲಸ ಮಾಡೋಣ ಎಂದರು.ಕೆ.ಆರ್.ಐ.ಡಿ.ಎಲ್. ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಸ್ವಾಮಿ ಅವರು ಮಾತನಾಡಿ ಸದರಿ ರಸ್ತೆಯು 5 ಮೀಟರ್ ಅಗಲ ಹಾಗೂ 1 ಕಿಲೋಮೀಟರ ಉದ್ದದಾಗಿದ್ದು 100 ಲಕ್ಷ ಮೊತ್ತದಾಗಿದೆ. ರಸ್ತೆ ಎರಡೂ ಪಕ್ಕದಲ್ಲಿ ಚರಂಡಿ ಮಾಡಿಸಿಕೊಡಲು ಬೇಡಿಕೆದ್ದು ಮುಂದಿನ ಅನುದಾನದಲ್ಲಿ ಇದನ್ನು ಮಾಡಿಕೊಡಲಾಗುವುದು. ಸದರಿ ರಸ್ತೆ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಲಾಗುವುದು ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು. ಭೂಮಿ ಪೂಜಾ ಸಮಾರಂಭದಲ್ಲಿ ಗಣ್ಯರಾದ ಮುದೇಪ್ಪಗೌಡ ಹಡಲಗೇರಿ, ಜಿ.ಜಿ. ಪಾಟೀಲ, ಮುತ್ತುಗೌಡ ಹಿಪ್ಪರಗಿ, ಅಶೋಕ ಬಿರಾದಾರ, ಶಿವನಗೌಡ ಚೌಧರಿ, ಶರಣಗೌಡ ದೇಶಮುಖ,ಬಿ.ಸಿ.ಪಾಟೀಲ,ಸಂಗನಗೌಡ ಅಸ್ಕಿ,ಸಂಗಮೇಶ ದೇಸಾಯಿ, ಅಬ್ದುಲ್ ರೆಹಮಾನ ಅವಟಿ, ಜಿ.ಎಸ್.ಐನಾಪೂರ, ಹುಸೇನ ವಾಲಿಕಾರ, ಸುರೇಶ ನೀರಲಗಿ, ಅಭಿಯಂತರ ಸಚೀನ ಮುಳಗಿ, ಸಾಹೇಬಗೌಡ ಬಿರಾದಾರ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *