Month: June 2026

ನ್ಯಾಯಾಲಯದಲ್ಲಿ ಪ್ರಕಾರಣ ದಾಖಲು ಹಿನ್ನಲೆ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ತಡೆ

ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿರುವ ಪುರಸಭೆ ಆಸ್ತಿ ಸಂಖ್ಯೆ 2-11-154ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಿನ್ನೆಲೆಯಲ್ಲಿ ದಾಖಲಾಗಿರುವ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಲಿಂಗಸಗೂರು ಪುರಸಭೆ ಮುಖ್ಯಾಧಿಕಾರಿ ಸೂಚನಾ ಪತ್ರ ಜಾರಿಗೊಳಿಸಿದ್ದಾರೆ. ಆಸ್ತಿ…

ಸ್ವಯಂಪ್ರೇರಿತ ಶಿಕ್ಷಣ ಸೇವೆ: ಗ್ರಾಮ ಗ್ರಾಮಕ್ಕೆ ತೆರಳಿ ಸರಕಾರಿ ಪಿಯು ಕಾಲೇಜಿಗೆ ವಿದ್ಯಾರ್ಥಿಗಳ ಆಹ್ವಾನ

ಬಳಗಾನೂರು, ಮೇ 2026-27ನೇ ಶೈಕ್ಷಣಿಕ ಸಾಲಿನಿಂದ ಬಳಗಾನೂರಿನಲ್ಲಿ ನೂತನವಾಗಿ ಆರಂಭವಾಗಿರುವ ಸರಕಾರಿ ಪದವಿಪೂರ್ವ ಕಾಲೇಜಿನ ದಾಖಲಾತಿಗಾಗಿ ಪಟ್ಟಣದ ಮುಖಂಡರು ಹಾಗೂ ಶಿಕ್ಷಣ ಪ್ರೇಮಿಗಳು ಕಳೆದ ಒಂದು ವಾರದಿಂದ ಸುತ್ತಮುತ್ತಲಿನ ಗ್ರಾಮಗಳು ಮತ್ತು ಕ್ಯಾಂಪ್ ಪ್ರದೇಶಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕಾಲೇಜಿಗೆ ಆಹ್ವಾನಿಸುತ್ತಿರುವುದು…

ಹಿಂದುಳಿದ ವರ್ಗಗಳ ಧ್ವನಿಗೆ ಸಚಿವ ಸ್ಥಾನ ನೀಡಿ: ಡಿ.ಟಿ. ಶ್ರೀನಿವಾಸ್ ಪರ ಮಲ್ಲಿಕಾರ್ಜುನ ಯಾದವ್ ಆಗ್ರಹ

ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಮಸ್ಕಿ ತಾಲೂಕು ಯಾದವ ಸಮಾಜದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹೆಚ್ ಯಾದವ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು,ಯಾದವ ಸಮಾಜದ ರಾಜ್ಯಾಧ್ಯಕ್ಷರು…

ಬಂಗಾರದ ಆಸೆಗೆ ವಿಘ್ನೇಶ್ವರನ ವಿಗ್ರಹವೇ ಭಗ್ನ ಹದಿನೈದೇ ದಿನದಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ ಬಳಗಾನೂರು ಆರಕ್ಷಕರು

ಬಳಗಾನೂರು: ಬಂಗಾರದ ಆಸೆಗೆ ಕಳ್ಳರು ದೇವರ ವಿಗ್ರಹವನ್ನೇ ಭಗ್ನಗೊಳಿಸಿರುವ ಅಮಾನವೀಯ ಘಟನೆ ಬಳಗಾನೂರಿನಲ್ಲಿ ನಡೆದಿದ್ದು, ಪ್ರಕರಣ ನಡೆದ ಕೇವಲ ಹದಿನೈದೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಆರಕ್ಷಕರು ಶ್ಲಾಘನೀಯ ಕಾರ್ಯಾಚರಣೆ ನಡೆಸಿದ್ದಾರೆ. ಬಳಗಾನೂರು ಪಟ್ಟಣದ ಆರಾಧ್ಯ ದೈವವಾದ ಬಂಧುಶತಪುರೇಶನ ದೇವಸ್ಥಾನದ ಆವರಣದಲ್ಲಿದ್ದ…

ವಶಿಷ್ಠಧಾಮದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಸನ್ಮಾನ

ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳು ಸದಾ ಚಲಾವಣೆಯಲ್ಲಿರಬೇಕಾದರೆ ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಜರುಗಬೇಕು. ಅಲ್ಲದೇ ಎಲೆಯ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವುದರಿಂದ ಅವರ ಸಾಧನೆಗೆ ಹಾಗೂ ಮುಂದಿನ ಸಾಮಾಜಿಕ ಚಿಂತನೆಗೆ ಕಾರಣವಾಗುವುದು ಎಂದು ವಶಿಷ್ಠಧಾಮ ಸೇವಾ ಟ್ರಸ್ಟ್ ಅಧ್ಯಕ್ಷರಾದ…

ಡಾ. ಚಂದ್ರಶೇಖರ್ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಶರಣಪ್ಪ ಲಿಂಗಸಗೂರು ಒತ್ತಾಯ

ಮಸ್ಕಿ : ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿರುವ ಡಾ. ಚಂದ್ರಶೇಖರ್ ಪಾಟೀಲ್ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವಂತೆ ಶರಣಪ್ಪ ಲಿಂಗಸಗೂರು ಒತ್ತಾಯಿಸಿದ್ದಾರೆ ಅವರು ಭಾನುವಾರ ಪತ್ರಿಕಾ ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕ ರಾಗಿರುವ ಹಾಗೂ…

ಜೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಮೂಕಪ್ರಾಣಿ ಬಲಿ: ಗೋರ್ಕಲ್ ಗ್ರಾಮಸ್ಥರ ಆಕ್ರೋಶ

ಮಾನ್ವಿ: ತಾಲೂಕಿನ ಗೋರ್ಕಲ್ ಗ್ರಾಮದಲ್ಲಿ ಜೆಸ್ಕಾಂ ಇಲಾಖೆ ಅಳವಡಿಸಿದ ವಿದ್ಯುತ್ ಪರಿವರ್ತಕದ ವಿದ್ಯುತ್ ಸ್ಪರ್ಶಕ್ಕೆ ಗ್ರಾಮದ ರೈತರೊಬ್ಬರ ಹಸು ಒಂದು ಮೃತಪಟ್ಟ ಘಟನೆ ನಡೆದಿದೆ ಭಾನುವಾರ ಗ್ರಾಮದಲ್ಲಿ ರೈತ ದಾದುಸಾಬ್ ಎನ್ನುವವರ ಎತ್ತು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಗ್ರಾಮಸ್ಥರು ಸಾಕಷ್ಟು ಬಾರಿ…