ತಾಳಿಕೋಟಿ: ನಮ್ಮ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರು ಈ ಸಂಸ್ಥೆಯ ಕುಟುಂಬದ ಸದಸ್ಯರಾಗಿದ್ದಾರೆ ಅವರ ಕುರಿತು ನಮಗೆ ಅಪಾರ ಗೌರವ ಇದೆ ಎಂದು ಎಸ್.ಎಸ್.ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಎಚ್ಎಸ್ ಪಾಟೀಲ ಹೇಳಿದರು. ಮಂಗಳವಾರ ಎಸ್.ಎಸ್.ವಿದ್ಯಾ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ಶಾಲಾ ಕಾಲೇಜುಗಳ 2026-2027 ರ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು ಅದರ ದುರುಪಯೋಗ ಮಾಡಿಕೊಳ್ಳಬಾರದು ಆಸಕ್ತಿಯಿಂದ ಅಧ್ಯಯನ ಮಾಡಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ವಿದ್ಯೆ ನೀಡುವ ಶಿಕ್ಷಕರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷರ ಜನ್ಮದಿನವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ,ಸಮವಸ್ತ್ರ, ಪಠ್ಯ ಪುಸ್ತಕ ನೀಡಲಾಯಿತು. ಶ್ರೀ ಎಚ್.ಎಸ್.ಪಾಟೀಲ ಪ.ಪೂ. ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕ ಪರಶುರಾಮ ಚೌಡಕರ ಮುಖ್ಯ ಅತಿಥಿಯಾಗಿದ್ದರು. ಸಂಸ್ಥೆಯ ಕಾರ್ಯದರ್ಶಿ ಸಚಿನ.ಎಚ್.
ಪಾಟೀಲ, ಶ್ರೀ ಎಸ್.ಎಸ್.ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಎಸ್.ಸಿ.ಗುಡಗುಂಟಿ ಎಸ್.ಎಸ್.ವಿದ್ಯಾಸಂಸ್ಥೆಗೆ ಹೊಸದಾಗಿ ಆಗಮಿಸಿದ ಉಪನ್ಯಾಸಕರನ್ನು ಶಿಕ್ಷಕ/ಶಿಕ್ಷಕಿಯರನ್ನು ಹಾಗೂ ಶಾಲಾ ವಾಹನ ಚಾಲಕರನ್ನು ಸ್ವಾಗತಿಸಿಕೊಂಡರು.ಶಿಕ್ಷಕ ಎಸ್.ವಿ ಜಾಮಗೊಂಡಿ ಸಂಸ್ಥೆಯ ಅದ್ಯಕ್ಷರನ್ನು ಸನ್ಮಾನಿಸಿ ಗೌರವಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ ನಿರೂಪಿಸಿ ವಂದಿಸಿದರು.

