ಸಿಂಧನೂರು ತಾಲೂಕಿನ ಗಾಂಧಿನಗರದ ಶ್ರೀಮತಿ ಉಪ್ಪಲಪಾಟಿ ಸತ್ಯವತಿ ರಂಗರಾವ್ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಸಾಲುಮರದ ಯುಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಇದೇ ವೇಳೆ ಶಿಕ್ಷಕರು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಾಲುಮರದ ತಿಮ್ಮಕ್ಕ ಯುಕೋ ಕ್ಲಬ್ ರಚಿಸಿ ಪ್ರತಿ 3-4 ವಿದ್ಯಾರ್ಥಿಗಳಿಗೆ ಒಂದೊಂದು ಸಸಿಯ ಜವಾಬ್ದಾರಿ ನೀಡಿ ಪೋಷಣೆ ಮಾಡಲು ತಿಳಿಸಲಾಯಿತು. ವಿದ್ಯಾರ್ಥಿಗಳು ಕೂಡಾ ಖುಷಿ ಖುಷಿಯಾಗಿ ಸಸಿನೆಟ್ಟು ನಿರುಣಿಸಿ ಜವಾಬ್ದಾರಿ ವಹಿಸಿಕೊಂಡರು .

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಬಿಸಿಲಿಗೆ ಸಾರ್ವಜಕರು ಸುಸ್ತಾಗಿದ್ದಾರೆ. ಬೇಸಿಗೆ ಕಾಲ ಬಂತಂದರೆ ಸಾಕು ಎಲ್ಲಿ ಗಿಡಮರಗಳಿವೆ ಅವುಗಳನ್ನೇ ತಂಗುದಾಣಗಳಾಗಿ ನಿರ್ಮಿಸಿಕೊಳ್ಳುತ್ತಾರೆ.ಮನೆಯಿಂದ ಹೊರ ಬರುವುದೇ ಕಠಿಣ.ಇಂತಹ ಸಂಧರ್ಭದಲ್ಲಿ ಬಿಸಿಲನ ತಾಪಮಾನ ಕಡಿಮೆಗೊಳಿಸಲು ವನಸಿರಿ ತಂಡ ಕಲ್ಯಾಣ ಕರ್ನಾಟಕವನ್ನು ಹಸಿರು ಕರ್ನಾಟಕ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ.ಈ ಗುರಿಯೊಂದಿಗೆ ಪ್ರತಿ ಶಾಲೆ ಕಾಲೇಜು,ದೇವಸ್ಥಾನಗಳಲ್ಲಿ,ಸರ್ಕಾರಿ ಕಛೇರಿ ಆವರಣದಲ್ಲಿ ಅತೀ ಹೆಚ್ಚು ಸಸಿಗಳನ್ನು ನೆಡುತ್ತಿದ್ದೇವೆ.ಇದಕ್ಕೆ ವಿದ್ಯಾರ್ಥಿಗಳನ್ನು ಸಹ ಸೇರಿಸಿಕೊಂಡಿರುತ್ತೇವೆ.ಪ್ರತಿ ಸರಕಾರಿ ಶಾಲೆಯನ್ನು ಹಸಿರುಕರಣ ಮಾಡುವುದೇ ನಮ್ಮ ವನಸಿರಿ ತಂಡದ ಮೊದಲ ಗುರಿಯಾಗಿದೆ ಇದಕ್ಕೆ ಎಲ್ಲಾ ಶಿಕ್ಷಕರು,ವಿದ್ಯಾರ್ಥಿಗಳು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಶಾಲೆಯ SDMC ಅಧ್ಯಕ್ಷ ಶ್ರೀ ಜಾನ್,ವನಸಿರಿ ಪೌಂಡೇಷನ್ ಮಸ್ಕಿ ತಾಲೂಕ ಅಧ್ಯಕ್ಷ ರಾಜು ಬಳಗಾನೂರ, ಕರವೇ ಅಧ್ಯಕ್ಷ ರಾಜಸಾಬ್, ಮುಖ್ಯ ಗುರು ಗುಂಡಪ್ಪ, SDMC ಮಾಜಿ ಅಧ್ಯಕ್ಷ MD ರಫಿ, ಚಂದ್ರಶೇಖರಯ್ಯ, ಶಿವರಾಜ,ವೆಂಕೋಬ,ಮಂಜುನಾಥ, ಗಂಗಾಧರ,ಶ್ರೀಮತಿ ನಾಗರತ್ನ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

 

Leave a Reply

Your email address will not be published. Required fields are marked *