ಸಿಂಧನೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳ ವಿಭಾಗ ರಾಯಚೂರು, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ, ರವರ ಮೂಲಕ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ ಅಯ್ಯನಗೌಡ ಪತ್ರಿಕೆಗಳೊಂದಿಗೆ ಮಾತನಾಡಿ, ಬರುವ ಜೂನ 28 ರಂದು ರಾಷ್ಟ್ರಾದ್ಯಂತ ಪಲ್ಸ್‌ ಪೋಲಿಯೊ ಲಸಿಕಾ ಅಭಿಯಾನ ಜರುಗಲಿದ್ದು, ಸಿಂಧನೂರು ತಾಲೂಕಿನಲ್ಲಿ ಸಹ ಹುಟ್ಟಿನಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೊ ಲಸಿಕೆ ಹಾಕಲಾಗುವುದು. ಅಲ್ಲದೆ, ಸಿಂಧನೂರು ನಗರ ಪ್ರದೇಶದ ವ್ಯಾಪ್ತಿಯ ಪೋಲಿಯೊ ಬೂತ್‌ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಅನುಕೂಲವಾಗಿಸಲು ತಮ್ಮ ಮನೆಯ ಹತ್ತಿರದ ಬೂತ್‌ಗಳಲ್ಲಿ ಸಹ ಲಸಿಕೆ ಹಾಕಿಸಲು, ತಮ್ಮ ಮೊಬೈಲ್ ‌ಗಳಲ್ಲಿ ಸದರಿ ಕ್ಯೂ‌ಆರ್‌ ಕೋಡ್‌
ಮೂಲಕ ಮಾಹಿತಿ ಪಡೆಯಲು ಅನೂಕೂಲವಾಗುವಂತೆ ಸಿದ್ದಪಡಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ‌ಪಡೆಯಲು ಕೊರಿದ್ದಾರೆ.
ಅಲ್ಲದೆ ದಿನಾಂಕ ಜೂನ 23, 24, 25 ರ ಮೂರು ದಿನಗಳ ವರೆಗೆ ಅಂಗನವಾಡಿ ಮಕ್ಕಳು, ಖಾಸಗಿ ಕಿಂಡರ್‌ ಗಾರ್ಟನ್‌ಗಳಲ್ಲಿ ಐದು ವರ್ಷದ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದು ತಿಳಿಸಿ ಸಾರ್ವಜನಿಕರು ಪೋಲಿಯೊ ಮುಕ್ತ ಭಾರತಕ್ಕಾಗಿ ಕೈಜೋಡಿಸಲು ಕೊರಿದ್ದಾರೆ.

Leave a Reply

Your email address will not be published. Required fields are marked *