ಸಿಂಧನೂರು – ತಾಲೂಕಿನ ಜವಳಗೇರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನಾಮಧೇಯ ವೃದ್ದೆಯಾಗಿ ಇದ್ದ ಅಂಬಮ್ಮ ವಯಸ್ಸು-78 ಸಾ. ಅರಳಹಳ್ಳಿ ಇವರನ್ನು ದಿನಾಂಕ 26-05-2026 ರಂದು ಆಸ್ಪತ್ರೆಯ ಸಿಬ್ಬಂದಿಗಳ ಮಾಹಿತಿ ಮೇರೆಗೆ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿಕೊಡಲಾಗಿತ್ತು. ಆಶ್ರಮದ ಸಿಬ್ಬಂದಿಗಳು ಈ ತಾಯಿಯ ಕುಟುಂಬವನ್ನು ಪತ್ತೆ ಹಚ್ಚಿ ಮಗ ಹಾಗೂ ಮಗಳಿಗೆ ಬುದ್ಧಿ ಹೇಳಿ ಮರಳಿ ಅವರ ಕುಟುಂಬಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ವಿವಿಧ ಕಡೆ ನಿರ್ಗತಿಕರು ನಿರಾಶ್ರಿತರ ಮಾಹಿತಿಯನ್ನು ಕೊಟ್ಟಾಗ ನಾವು ಅವರನ್ನು ಕರೆತಂದು ತಾತ್ಕಾಲಿಕ ಆಸೆಯ ಕಲ್ಪಿಸುತ್ತೇವೆ. ನಂತರ ಅವರ ಸಂಪೂರ್ಣ ವಿಳಾಸ ಹಾಗೂ ಅವರ ಬದುಕಿನ ಸ್ಥಿತಿಯನ್ನು ತಿಳಿದುಕೊಂಡು ಸಂಬಂಧಪಟ್ಟವರಿಗೆ ಸಂಪರ್ಕಿಸಿ ಅವರಿಗೆ ಬುದ್ಧಿ ಹೇಳಿ ಅವರವರ ಮನೆಗೆ ಕಳುಹಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆಶ್ರಮ ಹುಟ್ಟಿದಾಗಿನಿಂದಲೂ ಸಹ ಸುಮಾರು 90ಕ್ಕೂ ಹೆಚ್ಚು ಜನರನ್ನು ಮಕ್ಕಳೊಂದಿಗೆ ಮತ್ತು ಸಂಬಂಧಿಗಳೊಂದಿಗೆ ಸೇರಿಸಿರುತ್ತೇವೆ. ನಮ್ಮ ಉದ್ದೇಶ ಇಷ್ಟೆ ನಿಜವಾದ ಅನಾಥರಿಗೆ ನೊಂದ ಜೀವಿಗಳಿಗೆ ಆಶ್ರಯ ನೀಡುತ್ತಿದ್ದೇವೆ. ನಿಜವಾದ ಅನಾಥರ ಅನಿವಾರ್ಯಕ್ಕಾಗಿ ಹುಟ್ಟಿಕೊಂಡಿರುವ ಕಾರುಣ್ಯ ಆಶ್ರಮ ಸಾರ್ವಜನಿಕರಲ್ಲಿಯೂ ಕೂಡ ಹಲವಾರು ಅಭಿಯಾನಗಳ ಮೂಲಕ ನಿಮ್ಮ ಹೆತ್ತವರನ್ನು ದಯಮಾಡಿ ನಮ್ಮಂತಹ ವೃದ್ಧಾಶ್ರಮಕ್ಕೆ ತಳ್ಳಬೇಡಿ ಎನ್ನುವ ಸಂಕಲ್ಪದ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಎಲ್ಲಾ ಕಾರ್ಯಗಳಿಗೆ ದಾನಿಗಳೇ ದೇವರಾಗಿ ಕಾರುಣ್ಯ ಸಂಸ್ಥೆಯ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಈ ತಾಯಿಯು ಮೂಲತ ಸಿಂಧನೂರು ತಾಲೂಕಿನ ಅರಳಹಳ್ಳಿ ಗ್ರಾಮದ ಸಿದ್ದಪ್ಪ ಹಾಗೂ ಶರಣಮ್ಮ ಎನ್ನುವರ ಜನ್ಮದಾತೆಯಾಗಿದ್ದು. ಇಬ್ಬರು ಮಕ್ಕಳಿಗೂ ಬುದ್ಧಿವಾದ ಹೇಳುವ ಮೂಲಕ ಪುನಃ ಕುಟುಂಬಕ್ಕೆ ಸೇರಿಸಿರುವುದು ನಮಗೆ ಆತ್ಮ ತೃಪ್ತಿ ತಂದಿದೆ ಮುಂದಿನ ದಿನಮಾನಗಳಲ್ಲಿ ನಿಮ್ಮ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಬೇಕು ಎನ್ನುವ ಎಚ್ಚರದ ಸಂದೇಶಗಳೊಂದಿಗೆ ಅಂಬಮ್ಮಳನ್ನು ಅವರ ಕುಟುಂಬಕ್ಕೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಅವರ ಮಕ್ಕಳಾದ ಗಿಡ್ಡಪ್ಪ. ಶರಣಮ್ಮ ಗಂ.ತಿಪ್ಪಣ್ಣ. ಸಾಕ್ಷಿದಾರರಾದ ಈರಪ್ಪ ತಾಯಿ ಹುಸೇನಮ್ಮ. ಮತ್ತು ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ ಜ್ಯೋತಿ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *