ಅರಕೇರಾ : ಹಿಂದು – ಮುಸ್ಲಿಂ ಸೌಹಾರ್ದಕ್ಕೆ ಹೆಸರಾಗಿರುವ ಅರಕೇರಾ ಪಟ್ಟಣದಲ್ಲಿ ಮೊಹರಂವನ್ನು ಹಿರಿಯರ ಸಮ್ಮುಖದಲ್ಲಿ ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ದೇವದುರ್ಗ ಪೋಲಿಸ್ ಠಾಣೆಯ ಠಾಣೆಯ ಅಧಿಕಾರಿ ಎಸ್ ಮಂಜುನಾಥ ಪಿಐ ಹೇಳಿದರು.
ದೇವದುರ್ಗ ಪೋಲಿಸ್ ಠಾಣೆಯವತಿಯಿಂದ ಮೊಹರಂ ಹಬ್ಬದ ಅಂಗವಾಗಿ ಮಂಗಳವಾರ ಸಂಜೆ ಛವಡಿ ಕಟ್ಟೆಯಲ್ಲಿ ಶಾಂತಿ ಸಭೆಯನ್ನು ಜರುಗಿತು ಸಭೆಯಲ್ಲಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆ ಸಂಕೇತವಾಗಿವೆ. ಮೊಹರಂ ಹಬ್ಬವು ತ್ಯಾಗ ಪ್ರತಿಕವಾದ ಹಬ್ಬದಲ್ಲಿ ಭಕ್ತಿ ಇರಬೇಕು.ಅನ್ಯಧರ್ಮದ ಆಚರಣೆಗಳನ್ನು ಗೌರವದಿಂದ ಕಾಣಬೇಕು ಹಿಂದೂ- ಮುಸ್ಲಿಂ ಎನ್ನುವ ಭೇದ-ಭಾವವಿಲ್ಲದೇ ಆಚರಿಸುವ ಹಬ್ಬವಾಗಿದ್ದು. ಮೊಹರಂ ಹಬ್ಬದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸುವ ಜತೆಗೆ ಇಡೀ ಹಬ್ಬದಲ್ಲಿ ಗುಂಪುಗೂಡಿ ಹಲಗೆ ವಾದ್ಯಕ್ಕೆ ಅಲಾಯಿ ಕುಣಿತ ಕುಣಿಯುವುದು. ಯಾವುದೇ ಧರ್ಮಕ್ಕೆ ಧಕ್ಕೆ ತರುವಂತಹ ಅಥವಾ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆ ಸದಾ ಸಿದ್ದವಾಗಿದ್ದು ಯಾವದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿAದ ಮೊಹರಂ ಹಬ್ಬ ಆಚರಿಸುವಂತೆ ಎಸ್ ಮಂಜುನಾಥ ಪಿಐ ಹೇಳಿದರು.
ಸಂಧರ್ಬದಲ್ಲಿ ಸತ್ಯನಾರಾಯಣನಾಯಕ ಪೋಲಿಸ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಗ್ರಾಮದ ಮುಖಂಡರು. ಸೀತಣ್ಣನಾಯಕ ಗುರಿಕಾರ ಪ್ರಥಮದರ್ಜೆ ಗುತ್ತೇದಾರ ತಿಮ್ಮಪ್ಪನಾಯಕ ಪೋಲಿಸ್ ಪಾಟೀಳ್ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು,ಚಂದ್ರಶೇಖರಶೆಟ್ಟಿ, ಸುರೇಶಗೌಡಮಾಲಿಪಾಟೀಲ್,ವರದರಾಜನಾಯಕದೊರೆ, ಅಲಿಂಖಾಜಿಗುರುಗಳು, ಬಾಷವೈಲ್ಡಿಂಗ ಉಪಸ್ಥಿತರಿದ್ದರು.ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಟ್ಟಣದಲ್ಲಿ 9 ಮಸೀದಿಯ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *