Month: February 2026

ಮಹಾಶಿವರಾತ್ರಿಯಂದು ಈಶ್ವರನ ದರ್ಶನ ಪಡೆದು ಪುನೀತರಾದ ಭಕ್ತರು

ಲಿಂಗಸಗೂರು, ಫೆ.17 – ಮಹಾಶಿವರಾತ್ರಿ ನಿಮಿತ್ತ ಪಟ್ಟ ಣದ ಈಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನ, ಮಠ-ಮಾನ್ಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗುವ ಜತೆಗೆ ಭಕ್ತ ಸಮೂಹ ಪುಣ್ಯ ಕ್ಷೇತ್ರಗಳಿಗೆ ತೆರಳಿ ಮಹಾದೇವನ ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು. ಸ್ಥಳೀಯ…

ಮಸ್ಕಿ ತಾತಂ ಕಚೇರಿಯಲ್ಲಿ ಶಾಸಕ ಬಸನಗೌಡ ತುರುವಿಹಾಳ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಪಾಸ್ ಫೋರ್ಸ್ ಸಭೆ

ಮಸ್ಕಿ: ತಾಲೂಕಿನಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆವಹಿಸಿ- ಶಾಸಕ ಆರ್.ಬಸನಗೌಡ 16-ಎಂ ಎಸ್ ಕೆ-01 ಮಸ್ಕಿ: ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾ.ಪಂ ಅಧಿಕಾರಿಗಳು ಈಗಿನಿಂದಲೇ ನಿಗಾವಹಿಸಬೇಕು ಎಂದು ಖಾದಿ ಗ್ರಾಮೋದ್ಯೋಗ ಮಂಡಳಿ…

ತುಳುಜಾ ಭವಾನಿ ಮಂದಿರದಲ್ಲಿ ರುದ್ರಾಕ್ಷಿ ಗಳಿಂದ ಶಿವಲಿಂಗ

ಲಿಂಗಸಗೂರು : ಫೆ 17 .ಪಟ್ಟಣದ ಬಸವ ಸಾಗರ ರಸ್ತೆಯ ಲ್ಲಿರುವ ಶ್ರೀ ತುಳುಜಾ ಭವಾನಿ ಮಂದಿರದಲ್ಲಿ ವಿನೂತನ ಶಿವರಾತ್ರಿ ಹಬ್ಬ ಆಚರಣೆ ಹಬ್ಬದ ಪ್ರಯುಕ್ತ ಈ ಬಾರಿ ವಿಶೇಷ ರೀತಿಯಲ್ಲಿ ರುದ್ರಾಕ್ಷಿಯಿಂದ ಶಿವಲಿಂಗವನ್ನು ನಿರ್ಮಿಸಿ ಅದಕ್ಕೆ ವಿಧಿ ವಿಧಾನಗಳೊಂದಿಗೆ ಪೂಜೆ…

ಪುಲ್ವಾಮಾ ಘೋರ ದುಷ್ಕೃತ್ಯದಲ್ಲಿ ಸಿಆರ್‌ಪಿಎಫ್‌ ಯೋಧರ ಬಲಿದಾನ: ನಮನ

ಲಿಂಗಸಗೂರು : ಫೆ .17 ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾ ಎಂಬಲ್ಲಿ 2019 ರ ಫೆ.14 ರಂದು ಆತ್ಮಹತ್ಯಾ ಬಾಂಬರ್ ಎರಗಿದ ಘೋರ ದುಷ್ಕೃತ್ಯದಲ್ಲಿ 40 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಎಲ್ಲ ಯೋಧರ ಬಲಿದಾನವನ್ನು ಗೌರವಿಸಿ…

ಪಾಲಿಶ್ ನೆಪದಲ್ಲಿ ಐದು ತೊಲೆ ಚಿನ್ನ ದೋಚಿದ ಕಳ್ಳರು

ಲಿಂಗಸಗೂರು : ಫೆ .17 – ಪಟ್ಟಣದ ಎಸ್ ಬಿ ಎಚ್ ಕಾಲೋನಿಯಲ್ಲಿ ಶುಕ್ರವಾರ ನಡೆದ ಘಟನೆ ಸಾರ್ವ ಜನಿಕರಲ್ಲಿ ಆತಂಕ ಹುಟ್ಟಿಸಿದೆ. ಉಚಿತವಾಗಿ ಚಿನ್ನಾ ಭರಣ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಬಳಿಯಿದ್ದ ಸುಮಾರು ಐದು ತೊಲೆ…

ಗೃಹ ಆರೋಗ್ಯ ಯೋಜನೆಯ ಮಹತ್ವ ಅರಿಯೋಣ: ಡಾ.ಸುರೇಂದ್ರ ಬಾಬು ಸಲಹೆ

ರಾಯಚೂರು ಫೆಬ್ರವರಿ 16 (ಕರ್ನಾಟಕ ವಾರ್ತೆ): ಆರ್ಥಿಕ ತೊಂದರೆಯುಳ್ಳ ನಗರದ ಪ್ರದೇಶದ ಜನತೆಗೂ ಸಹ ಶೀಘ್ರದಲ್ಲಿಯೇ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿ ಸೌಲಭ್ಯ ಒದಗಿಸುವುದಕ್ಕೆ ಅಗತ್ಯ ಸಿದ್ಧತೆ ಕೈಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು…

ಪತ್ರಕರ್ತರ ತುರ್ತು ನಿಧಿ ಯೋಜನೆ ರೂಪಿಸಿದ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಾರ್ಯ ಶ್ಲಾಘನೀಯ

ರಾಯಚೂರು ಫೆಬ್ರವರಿ 16 (ಕರ್ನಾಟಕ ವಾರ್ತೆ): ರಾಯಚೂರು ರಿಪೋರ್ಟರ್ಸ್ ಗಿಲ್ಡ್ ರೂಪಿಸಿರುವ ಪತ್ರಕರ್ತರ ತುರ್ತು ನಿಧಿಯಿಂದ ಹಿರಿಯ ಪತ್ರಕರ್ತ ದಿ.ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಕಾರ್ಯಕ್ರಮ ಫೆ.16ರಂದು ನಡೆಯಿತು. ರಾಯಚೂರು ಪ್ರವಾಸದಲ್ಲಿದ್ದ, ಕರ್ನಾಟಕ ವಿಧಾನ…

ನಿಧನ ವಾರ್ತೆ ಭಾವಪೂರ್ಣ ಶ್ರದ್ಧಾಂಜಲಿ

ಕವಿತಾಳ : ಪಟ್ಟಣ ಸಮೀಪದ ಸೈದಾಪೂರ ಗ್ರಾಮದ ದೊಡ್ಡಮಲ್ಲಯ್ಯ (೭೦) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ, ಮೃತರಿಗೆ ಪತ್ನಿ, ೬ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದಾರೆ ,ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮದಲ್ಲಿ ಸೋಮವಾರ…