ಲಿಂಗಸಗೂರು, ಫೆ.17 – ಮಹಾಶಿವರಾತ್ರಿ ನಿಮಿತ್ತ ಪಟ್ಟ ಣದ ಈಶ್ವರ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧ ದೇವಸ್ಥಾನ, ಮಠ-ಮಾನ್ಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗುವ ಜತೆಗೆ ಭಕ್ತ ಸಮೂಹ ಪುಣ್ಯ ಕ್ಷೇತ್ರಗಳಿಗೆ ತೆರಳಿ ಮಹಾದೇವನ ದರ್ಶನ ಪಡೆಯುವ ದೃಶ್ಯ ಸಾಮಾನ್ಯವಾಗಿತ್ತು.
ಸ್ಥಳೀಯ ಈಶ್ವರ ದೇವಸ್ಥಾನ, ನಗರೇಶ್ವರ ದೇವಸ್ಥಾನ, ಇತಿಹಾಸ ಪ್ರಸಿದ್ದ ಸುಕ್ಷೇತ್ರ ಅಮರೇಶ್ವರ ಹಾಗೂ ಗುರುಗುಂಟಾದ ಈಶ್ವರ ದೇವಸ್ಥಾನ, ನವಲಿ ಜಡೆಶಂಕರಲಿಂಗೇಶ್ವರ, ಘನಮಠೇಶ್ವರ ಸಂತೆಕಲ್ಲೂರು ಮಠ, ದೇವರಭೂಪುರ ಬೃಹನ್ಮಠ, ಯರ ಡೋಣಿ ಸಿದ್ದರಾಮೇಶ್ವರ ಗುರುಮಠ, ಸಜ್ವಲಗುಡ್ಡದ ಅಂಕಲಿಮಠ, ಶರಣಮ್ಮನವರ ಮಠ ಸೇರಿದಂತೆ ನಾನಾ ಮಠ-ಮಂದಿರಗಳಲ್ಲಿ ಬೆಳಗ್ಗೆ ಯಿಂದಲೆ ವಿಶೇಷ ಪೂಜೆಗಳು ಜರು ಗಿದವು.

ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬೆಳಗ್ಗೆಯಿಂದ ಉಪವಾಸ ವೃತಕೈಗೊಂಡ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನೂರಾರು ಭಕ್ತರು ಸಂಜೆ ಈಶ್ವರನ ದರ್ಶನ ಪಡೆದು ವೃತ ಅಂತ್ಯಗೊಳಿಸುವರು.
ಈಶ್ವರ ದೇವಸ್ಥಾನ ಸಮಿತಿಯ ಡಾ.ಎನ್. ಎಲ್.ನಡುವಿನಮನಿ, ಡಾ.ಶರಣಗೌಡ, ವೀರೇಶ ಐದನಾಳ, ಬಿ.ಆರ್.ಮೇಟಿ, ಮಲ್ಲಣ್ಣವಾರದ ಸೇರಿದಂತೆ ದೇವರ ದರ್ಶನ ಪಡೆಯಲು ಆಗಮಿಸುವ ಭಕ್ತರ ಮಧ್ಯೆ ನೂಕುನುಗ್ಗಲು ಏರ್ಪಡದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು ಹಾಗೂ ಈ ಸಂದರ್ಭದಲ್ಲಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು.

Leave a Reply

Your email address will not be published. Required fields are marked *