ಲಿಂಗಸಗೂರು : ಫೆ 17 .ಪಟ್ಟಣದ ಬಸವ ಸಾಗರ ರಸ್ತೆಯ ಲ್ಲಿರುವ ಶ್ರೀ ತುಳುಜಾ ಭವಾನಿ ಮಂದಿರದಲ್ಲಿ ವಿನೂತನ ಶಿವರಾತ್ರಿ ಹಬ್ಬ ಆಚರಣೆ
ಹಬ್ಬದ ಪ್ರಯುಕ್ತ ಈ ಬಾರಿ ವಿಶೇಷ ರೀತಿಯಲ್ಲಿ ರುದ್ರಾಕ್ಷಿಯಿಂದ ಶಿವಲಿಂಗವನ್ನು ನಿರ್ಮಿಸಿ ಅದಕ್ಕೆ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಭಾವದಿಂದ ಶಿವರಾತ್ರಿ ಆಚರಿಸಲಾಯಿತು.
ಪ್ರತಿವರ್ಷವೂ ಮಂದಿರದ ಆಡಳಿತ ಮಂಡಳಿಯು ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳಿಂದ ವಿಭಿನ್ನ ರೂಪದ ಶಿವಲಿಂಗವನ್ನು ನಿರ್ಮಿಸಿ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸುವ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈ ವರ್ಷದ ಶಿವರಾತ್ರಿ ಹಬ್ಬಕ್ಕೂ ಅದೇ ರೀತಿಯಲ್ಲಿ ವಿನೂತನ ಶಿವಲಿಂಗ ನಿರ್ಮಿಸಿ ವಿಶೇಷ ಪೂಜೆ ನಡೆಸಲಾಯಿತು. ರುದ್ರಾಕ್ಷಿಯಿಂದ ರೂಪುಗೊಂಡ ಶಿವಲಿಂಗವು ಭಕ್ತರಲ್ಲಿ ಅಪಾರ ಆಕರ್ಷಣೆ ಮೂಡಿಸಿತು.
ಶಿವರಾತ್ರಿ ಅಂಗವಾಗಿ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಆರತಿ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವಲಿಂಗದ ದರ್ಶನವನ್ನು . ಭಕ್ತಿಭಾವದಿಂದ ಪಡೆದರು
ಈ ಸಂದರ್ಭದಲ್ಲಿ ತುಳುಜಾ ಭವಾನಿ ಮಂದಿರದ ಅರ್ಚಕರಾದ ತಿರುಮಲರಾವು ಕೃಷ್ಣ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ದಶರಥ ರಾವ್ ಮಿರಜಕರ ಉಪಾಧ್ಯಕ್ಷರಾದ ಶ್ರೀನಿವಾಸ ಬುಸಾರೆ ಖಜಾಂಚಿ ದೇವರಾಜ ಛತ್ರಬಂಧ ಶಾಮ ಚವ್ಹಾಣ ಪತ್ರಕರ್ತರಾದ ಗೌತಮ್ ಕುಮಾರ ಸೋಮಶೇಖರ ಪ್ರಿಯಾದರ್ಶಿನಿ ಮಹಿಳೆಯರು ಚಿಕ್ಕ ಮಕ್ಕಳು ಭಕ್ತಾದಿಗಳು , ಭಾಗವಹಿಸಿ ಶಿವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ವಿನೂತನ ಶಿವಲಿಂಗ ನಿರ್ಮಾಣ ಹಾಗೂ ಶ್ರದ್ಧಾಭಕ್ತಿಯಿಂದ ನಡೆದ ಪೂಜಾ ಕಾರ್ಯಕ್ರಮಗಳು ಭಕ್ತರಲ್ಲಿ ಧಾರ್ಮಿಕ ಉತ್ಸಾಹ ಹೆಚ್ಚಿಸಿದವು. ಮಂದಿರ ಆಡಳಿತ ಮಂಡಳಿ ಮುಂದಿನ ವರ್ಷವೂ ಇನ್ನೂ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸುವುದಾಗಿ ತಿಳಿಸಿದೆ.

