ಲಿಂಗಸಗೂರು : ಫೆ .17 ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾ ಎಂಬಲ್ಲಿ 2019 ರ ಫೆ.14 ರಂದು ಆತ್ಮಹತ್ಯಾ ಬಾಂಬರ್ ಎರಗಿದ ಘೋರ ದುಷ್ಕೃತ್ಯದಲ್ಲಿ 40 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಎಲ್ಲ ಯೋಧರ ಬಲಿದಾನವನ್ನು ಗೌರವಿಸಿ ದೇಶಾದ್ಯಂತ ನಮನ ಸಲ್ಲಿಸಲಾಯಿತು.
ಅದರಂತೆ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಮಾಜಿ ಸೈನಿಕರು ಹಾಗೂ ಶಾಸಕ ಮಾನಪ್ಪ ವಜ್ಜಲ್ ಸೇರಿದಂತೆ ಅನೇಕ ಮುಖಂಡರು ಕ್ಯಾಂಡಲ್ ಹಿಡಿದು ನಮನ ಸಲ್ಲಿಸಿದರು. ಬಳಿಕ ಗಡಿಯಾರ ವೃತ್ತದವರೆಗೆ ತೆರಳಿ ಅಲ್ಲಿಯೂ ಕ್ಯಾಂಡಲ್ ಹಚ್ಚಿ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *