ಲಿಂಗಸಗೂರು : ಫೆ .17 – ಪಟ್ಟಣದ ಎಸ್ ಬಿ ಎಚ್ ಕಾಲೋನಿಯಲ್ಲಿ ಶುಕ್ರವಾರ ನಡೆದ ಘಟನೆ ಸಾರ್ವ ಜನಿಕರಲ್ಲಿ ಆತಂಕ ಹುಟ್ಟಿಸಿದೆ. ಉಚಿತವಾಗಿ ಚಿನ್ನಾ ಭರಣ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಬಳಿಯಿದ್ದ ಸುಮಾರು ಐದು ತೊಲೆ ತೂಕದ ನಾಲ್ಕು ಚಿನ್ನದ ಬಳೆಗಳನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಶಾದೇವಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಇಬ್ಬರು ವ್ಯಕ್ತಿಗಳು ಮನೆಗೆ ಬಂದು ಚಿನ್ನಾಭರಣವನ್ನು ಉಚಿತವಾಗಿ ಸ್ವಚ್ಛಗೊಳಿಸಿ ಹೊಸದಾಗಿ ಮಿನುಗುವಂತೆ ಮಾಡಿಕೊಡುವುದಾಗಿ ತಿಳಿಸಿದರು. ಅವರ ಮಾತಿಗೆ ನಂಬಿಕೆ ಇಟ್ಟ ಮಹಿಳೆ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆಗಳನ್ನು ಪಾಲಿಶ್ ಮಾಡಲು ನೀಡಿದರು.
ಮನೆಯಲ್ಲೇ ಪಾತ್ರೆ ಯಲ್ಲಿ ನೀರು ಕಾಯಿಸಿ, ಗ್ಯಾಸ್ ಒಲೆಯ ಮೇಲೆ ಬಳೆಗ ಳನ್ನು ಹಾಕಿ 15 ನಿಮಿಷಗಳಲ್ಲಿ ಸ್ವಚ್ಛ ಗೊಳಿಸುತ್ತೇವೆ ಎಂದು ಹೇಳಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದರು. ಈ ವೇಳೆ ಕುಶಲತೆಯಿಂದ ಚಿನ್ನದ ಬಳೆಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾದರು ಎನ್ನ ಲಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಾರಣವನ್ನು ದಾಖಲಿಸಿ ಕೊಂಡಿದ್ದಾರೆ .

